ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಬಾಂಗ್ಲಾದೇಶ ಅವಾಮಿ ಲೀಗ್ ಪರ ಅವರು ಮುಂಬರುವ ಜನವರಿ 7ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.

ಅವರು ಮೂರು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಲು ಶನಿವಾರ ಅರ್ಜಿಗಳನ್ನು ಪಡೆದಿರುವುದಾಗಿ ಅವಾಮಿ ಲೀಗ್ ಜಂಟಿ ಕಾರ್ಯದರ್ಶಿ ಬಹಾವುದ್ದೀನ್ ನಸೀಮ್ ಎಎಫ್ಪಿಗೆ ತಿಳಿಸಿದ್ದಾರೆ.

ವಿಪಕ್ಷಗಳು ಚುನಾವಣೆ ಬಹಿಷ್ಕರಿಸಲು ಮುಂದಾಗಿವೆ.

‘ಅವರು ಸೆಲೆಬ್ರಿಟಿ. ಜೊತೆಗೆ ಯುವ ಸಮುದಾಯದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ’ ಎಂದು ನಸೀಮ್ ಹೇಳಿದ್ದಾರೆ.

ಶಕೀಬ್ ಅವರ ಉಮೇದುವಾರಿಕೆಯನ್ನು ಪ್ರಧಾನಿ ಆಡಳಿತ ಪಕ್ಷದ ಸಂಸದೀಯ ಮಂಡಳಿ ಖಚಿತಪಡಿಸಲು ಬಾಕಿಯಿದೆ.

ಅವರು ನೈರುತ್ಯ ಭಾಗದ ತವರು ಜಿಲ್ಲೆ ಮಗುರಾದ ಅಥವಾ ಢಾಕಾದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಮೂರೂ ಮಾದರಿಗಳಲ್ಲಿ ತಂಡದ ನಾಯಕರಾಗಿದ್ದ ಶಕಿಬ್ ಬೆರಳಿನ ಗಾಯದಿಂದ ಈಗ ತಂಡದಿಂದ ಹೊರಗುಳಿದಿದ್ದಾರೆ.

ಮಾಜಿ ನಾಯಕ ಮಷ್ರಫೆ ಮೊರ್ತಾಜಾ ಅವರು 2018ರಲ್ಲಿ ರಾಜಕೀಯ ರಂಗಕ್ಕೆ ಇಳಿದು ಅದೇ ವರ್ಷ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ಅವರು 2019ರ ವಿಶ್ವಕಪ್ನಲ್ಲಿ ಆಡಿದ್ದರು. ನಂತರ ರಾಜಕೀಯದಲ್ಲಿ ಗಮನ ಕೇಂದ್ರೀಕರಿಸಲು ಕ್ರಿಕೆಟ್ಗೆ ವಿದಾಯ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.