ಮೆಲ್ಬೋರ್ನ್: ಬಿಗ್ ಬಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಆಡುವ ಅಫ್ಗಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುವ ಪಾಕಿಸ್ತಾನದ ಹ್ಯಾರಿಸ್ ರೌಫ್ ಬುಧವಾರ ಹ್ಯಾಟ್ರಿಕ್ ವಿಕೆಟ್ ಕಿತ್ತು ಸಂಭ್ರಮಿಸಿದರು.

ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದಅಡಿಲೇಡ್ ಸ್ಟ್ರೈಕರ್ಸ್ 19.4 ಓವರ್‌ಗಳಲ್ಲಿ 135 ರನ್ ಗಳಿಸಿ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಸಿಡ್ನಿ ಸಿಕ್ಸರ್ ಪಡೆಯನ್ನು ರಶೀದ್ ಖಾನ್ ಕಾಡಿದರು.10ನೇ ಓವರ್ ಕೊನೆಯ ಎರಡು ಎಸೆತಗಳಲ್ಲಿ ಕ್ರಮವಾಗಿ ಜೇಮ್ಸ್ ವಿನ್ಸ್ ಮತ್ತು ಜಾಕ್ ಎಡ್ವರ್ಸ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಬಳಿಕ 12ನೇ ಓವರ್‌ನ ಮೊದಲ ಎಸೆತದಲ್ಲಿ ಜೋರ್ಡನ್ ಸಿಲ್ಕ್ ವಿಕೆಟ್ ಪಡೆದು ಸಂಭ್ರಮಿಸಿದರು.

ರಶೀದ್ ಪರಿಣಾಮಕಾರಿ ಬೌಲಿಂಗ್ ದಾಳಿಯ ಹೊರತಾಗಿಯೂ ಸಿಕ್ಸರ್ಸ್,18.4 ಓವರ್‌ಗಳಲ್ಲಿ ಗುರಿ ತಲುಪಿಗೆದ್ದು ಬೀಗಿತು.

ಮೊಲ್ಬೋರ್ನ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ವೇಗಿ ಹ್ಯಾರಿಸ್ ಪ್ರತಾಪ ತೋರಿದರು. ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಥಂಡರ್ಸ್ ತಂಡಕ್ಕೆ ಅವರು ತಡೆಯಾದರು. ಅವರು ಕೊನೆಯ ಓವರ್‌ನ 2,3, ಮತ್ತು 4ನೇ ಎಸೆತಗಳಲ್ಲಿ ಸತತ ಮೂರು ವಿಕೆಟ್ ಉರುಳಿಸಿ ಮಿಂಚಿದರು.

ಕಲ್ಲಮ್ ಫರ್ಗ್ಯೂಸನ್ (35), ಮ್ಯಾಥ್ಯೂ ಗಿಲ್ಕೆಸ್ (41) ಮತ್ತು ಡೆನಿಯಲ್ ಸ್ಯಾಮ್ಸ್ (0) ರೌಫ್ ದಾಳಿಗೆ ಸಿಲುಕಿದರು. ಇದರನೆರವಿನಿಂದ ಸ್ಟಾರ್ಸ್ ಪಡೆ ಥಂಡರ್ಸ್ ತಂಡವನ್ನು ಕೇವಲ 145 ರನ್ ಗಳಿಗೆ ನಿಯಂತ್ರಿಸಿತು.

ಈಸಾಧಾರಣ ಗುರಿಯನ್ನು 13 ಎಸೆತ ಬಾಕಿ ಇರುವಂತೆಯೇ ಮುಟ್ಟಿದ ಸ್ಟಾರ್ಸ್, ಆರು ವಿಕೆಟ್ ಅಂತರದ ಜಯ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.