ನವದೆಹಲಿ : ಹಿರಿಯ ಕ್ರಿಕೆಟಿಗ ಮದನ್ ಲಾಲ್ ಮತ್ತು ಗೌತಮ್ ಗಂಭೀರ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಗೆ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿದ್ಧವಾಗಿದೆ.

1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ ಮದನ್ ಮತ್ತು 2011ರ ವಿಶ್ವಕಪ್ ಜಯಿಸಿದ ತಂಡದ ಗಂಭೀರ್ ಅವರ ಈ ಸಮಿತಿಯು ನಾಲ್ಕು ವರ್ಷ ಕಾರ್ಯನಿರ್ವಹಿಸಲಿದೆ.

ಮುಂಬೈನ ಹಿರಿಯ ಆಟಗಾರ್ತಿ ಸುಲಕ್ಷಣಾ ನಾಯಕ ಅವರೂ ಈ ಸಮಿತಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸುಲಕ್ಷಣಾ, ಎರಡು ಟೆಸ್ಟ್ ಮತ್ತು 46 ಏಕದಿನ ಪಂದ್ಯ ಗಳನ್ನು ಆಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಂಭೀರ್ ಅವರು ಸದ್ಯ ಸಂಸದರಾಗಿದ್ದಾರೆ. ಕ್ರಿಕೆಟ್ ವೀಕ್ಷಕ ವಿವರಣೆಗಾರರೂಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.