ನವದೆಹಲಿ:ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ–ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕಾತರರಾಗಿದ್ದಾರೆ. ಏಷ್ಯಾ ಕಪ್‌ನ ಸೆಪ್ಟೆಂಬರ್ 19ರ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಲಿವೆ. ಆದರೆ, ನಿಗದಿಯಾಗಿರುವ ವೇಳಾಪಟ್ಟಿ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಸಮಾಧಾನ ಹೊರಹಾಕಿದೆ.

2018ರ ಹೈವೋಲ್ಟೇಜ್ ಪಂದ್ಯವೆಂದೇ ಬಣ್ಣಿಸಲಾಗುತ್ತಿರುವ ಭಾರತ–ಪಾಕ್ ಪಂದ್ಯದ ಹಿಂದಿನ ದಿನ, ಅರ್ಹತೆ ಪಡೆದ ತಂಡದೊಂದಿಗೆ ಭಾರತಕ್ಕೆ ಮತ್ತೊಂದು ಪಂದ್ಯ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿರುವ ಏಷ್ಯಾ ಕಪ್ ವೇಳಾಪಟ್ಟಿಯಲ್ಲಿ ಭಾರತ ಆಡಲಿರುವ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ’ಇದೊಂದು ಬುದ್ಧಿಹೀನ ನಿರ್ಧಾರ’ ಎಂದಿದೆ.

ಯಾವುದೇ ಯೋಚನೆ ಮಾಡದೆ ಈ ವೇಳಾಪಟ್ಟಿ ರೂಪಿಸಲಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರಿಕೆಟ್‌ನೆಕ್ಸ್ಟ್‌ಗೆ ಹೇಳಿರುವುದಾಗಿ ವರದಿಯಾಗಿದೆ. ’ಈ ಪಟ್ಟಿ ಸಿದ್ಧಪಡಿಸುವವರು ತಲೆಯನ್ನೇ ಖರ್ಚು ಮಾಡಿದಂತಿಲ್ಲ.ಪಾಕಿಸ್ತಾನದೊಂದಿಗೆ ಪಂದ್ಯ ಆಡುವಾಗ ಒಂದು ದಿನದ ಬಿಡುವೂ ಇಲ್ಲದೆ ಭಾರತಕ್ಕೆ ಪಂದ್ಯ ನಿಗದಿಯಾಗಿದೆ. ಪಾಕಿಸ್ತಾನ ತಂಡಕ್ಕೆ ಎರಡು ದಿನಗಳ ಬಿಡುವು ನೀಡಲಾಗಿದೆ. ಇಂಥದ್ದನ್ನು ಒಪ್ಪಿಕೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ಈ ಪಟ್ಟಿಯನ್ನು ಒಪ್ಪಲು ಸಾಧ್ಯವಿಲ್ಲ, ಇದನ್ನು ಪರಿಷ್ಕರಿಸಲೇಬೇಕಾಗಿದೆ. ಆಯೋಜಕರಿಗೆ ಇದು ಕೇವಲ ಹಣ ಹರಿಸುವ ಪಂದ್ಯವಾಗಿರಬಹುದು. ಆದರೆ, ನಮಗೆ ವೇಳಾಪಟ್ಟಿಯಲ್ಲಿ ಸಮತೋಲನ ಅಗತ್ಯ ಎಂದಿದ್ದಾರೆ.

ಅರ್ಹತೆ ಪಡೆದ ತಂಡದೊಂದಿಗೆ ಸೆಪ್ಟೆಂಬರ್ 16ರಂದು ಪಾಕಿಸ್ತಾನ ಸೆಣಸಲಿದೆ. ನಂತರ, ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಎರಡು ದಿನ ಅಭ್ಯಾಸ ನಡೆಸಲು ಅವಕಾಶವಿದೆ.

ಏಷ್ಯಾ ಕಪ್ 2018:

ಎರಡು ವರ್ಷಗಳಿಗೊಮ್ಮೆ ನಡೆಯುವ ಏಷ್ಯಾ ಕಪ್ ಚಾಂಪಿಯನ್‌ಷಿಪ್ ಈ ಬಾರಿ ಸೆಪ್ಟೆಂಬರ್ 15ರಿಂದ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 18ರಂದು ಭಾರತ ಮೊದಲ ಪಂದ್ಯವನ್ನು ಆಡಲಿದ್ದು, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಗ್ರೂಪ್ ಎ ಮತ್ತು ಬಿ ಗುಂಪುಗಳಲ್ಲಿ ಸೂಪರ್ 4 ಹಂತಕ್ಕೆ ಪ್ರತಿ ಗುಂಪಿನಿಂದ ಅಧಿಕ ಪಾಯಿಂಟ್ ಪಡೆದ ಮೊದಲ ಎರಡು ತಂಡಗಳು ಅರ್ಹತೆ ಪಡೆಯಲಿವೆ. ಅಂತಿಮವಾಗಿ ಎರಡು ತಂಡಗಳು ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಸೆಣಸಲಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನತಂಡಗಳ ಪಂದ್ಯಗಳ ಪಟ್ಟಿ ಈಗಾಗಲೇ ನಿಗದಿಯಾಗಿದ್ದು, ಅರ್ಹತಾ ತಂಡಗಳ ಸ್ಥಾನಕ್ಕೆ ಯುಎಇ, ಸಿಂಗಾಪುರ, ಓಮನ್, ನೇಪಾಳ, ಮಲೇಷ್ಯಾ ಹಾಗೂ ಹಾಂಗ್ ಕಾಂಗ್ ಪೈಪೋಟಿ ನಡೆಸಲಿವೆ.

ಮೊದಲ ಹಂತದ ಪಂದ್ಯಗಳು:

ಸೆ. 15: ಬಾಂಗ್ಲಾದೇಶ–ಶ್ರೀಲಂಕಾ (ದುಬೈ)

ಸೆ.16: ಪಾಕಿಸ್ತಾನ– ಅರ್ಹತೆ ಪಡೆದ ತಂಡ (ದುಬೈ)

ಸೆ.17: ಶ್ರೀಲಂಕಾ–ಅಫ್ಘನಿಸ್ತಾನ (ಅಬು ಧಾಬಿ)

ಸೆ.18: ಭಾರತ–ಅರ್ಹತೆ ಪಡೆದ ತಂಡ (ದುಬೈ)

ಸೆ.19: ಭಾರತ–ಪಾಕಿಸ್ತಾನ (ದುಬೈ)

ಸೆ.20: ಬಾಂಗ್ಲಾದೇಶ–ಅಫ್ಗಾನಿಸ್ತಾನ(ಅಬು ಧಾಬಿ)

ಸೆ.21–ಸೆ.26– ಸೂಪರ್ 4ಪಂದ್ಯಗಳು

ಸೆ.28: ಫೈನಲ್ ಪಂದ್ಯ (ದುಬೈ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.