ಮೆಲ್ಬರ್ನ್: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಶಿಕ್ಷೆ ಮುಗಿದ ನಂತರ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಬಿಗ್ಬ್ಯಾಷ್ ಲೀಗ್ನ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ಪರವಾಗಿ
ಕಣಕ್ಕೆ ಇಳಿದ ಅವರು ಎದುರಿಸಿದ ಮೂರನೇ ಎಸೆತದಲ್ಲೇ ಔಟಾಗಿ ಮರಳಿದರು.

ಹೋಬರ್ಟ್ ಹರಿಕೇನ್ಸ್ ಎದುರಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಅವರು ಕ್ರೀಸ್ಗೆ ಬಂದಿದ್ದರು. ಆಗ ಸ್ಕಾರ್ಚರ್ಸ್ ತಂಡದ ಮೊತ್ತ 3ಕ್ಕೆ 16 ಆಗಿತ್ತು. ಮೊದಲ ಎಸೆತ ಬ್ಯಾಂಕ್ರಾಫ್ಟ್ ಅವರ ಪ್ಯಾಡ್ಗೆ ತಗುಲಿ ಸ್ಕ್ವೇರ್ಲೆಗ್ ಕಡೆಗೆ ಸಾಗಿತು. ನಂತರದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಮೂರನೇ ಎಸೆತ ಬ್ಯಾಟಿನ ಅಂಚಿಗೆ ಸೋಕಿ ಹಿಂದೆ ಚಿಮ್ಮಿತು. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕ್ಯಾಚ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.