ನಾಗಪುರ: ಎನ್. ಜಯೇಶ್ (151) ಭರ್ಜರಿ ಶತಕ ಮತ್ತು ಮನೋಜ್ ಭಾಂಡಗೆ (61) ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ, ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಎರಡನೇ ದಿನವಾದ ಬುಧವಾರ ಮೊದಲ ಇನಿಂಗ್ಸ್ ಮೊತ್ತವನ್ನು 390 ರನ್ಗಳಿಗೆ ಬೆಳೆಸಿತು.

ದಿನದಾಟ ಮುಗಿದಾಗ ಆತಿಥೇಯ ವಿದರ್ಭ 3 ವಿಕೆಟ್ಗೆ 100 ರನ್ ಗಳಿಸಿದೆ.

ಜಯೇಶ್ 362 ಎಸೆತಗಳನ್ನೆದುರಿಸಿ, ಅವುಗಳಲ್ಲಿ 21 ಅನ್ನು ಬೌಂಡರಿಗಟ್ಟಿದರು. ಭಾಂಡಗೆ 121 ಎಸೆತಗಳ ಆಟದಲ್ಲಿ ಮೂರು ಸಿಕ್ಸರ್, ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಕಿಶನ್ ಬೇದರೆ 47 (8 ಬೌಂಡರಿ) ರನ್ಗಳ ಕಾಣಿಕೆಯಿತ್ತರು.

ವಿದರ್ಭ ಮೊದಲ ಎರಡು ವಿಕೆಟ್ಗಳನ್ನು ಕೇವಲ ಎಂಟು ರನ್ನಿಗೆ ಕಳೆಉದಕೊಂಡಿತ್ತು. ಆದರೆ ಎ.ಡಿ. ಚೌಧರಿ (28) ಮತ್ತು ವೈ.ವಿ.ರಾಥೋಡ್ (ಬ್ಯಾಟಿಂಗ್ 44, 48 ಎಸೆತ) ಮೂರನೇ ವಿಕೆಟ್ಗೆ 55 ರನ್ ಸೇರಿಸಿ ಚೇತರಿಕೆ ನೀಡಿದರು.

ಸ್ಕೋರುಗಳು: ಕರ್ನಾಟಕ: 156.5 ಓವರುಗಳಲ್ಲಿ 390 (ಎನ್.ಜಯೇಶ್ 151, ಕಿಶನ್ ಬೇದರೆ 47, ಮನೋಜ್ ಭಾಂಡಗೆ 61; ಡಿ.ಜಿ.ನಲ್ಕಂಡೆ 60ಕ್ಕೆ3, ಎ.ಡಿ.ಚೌಧರಿ 47ಕ್ಕೆ3); ವಿದರ್ಭ: 22 ಓವರುಗಳಲ್ಲಿ 3 ವಿಕೆಟ್ಗೆ 100 (ಎ.ಡಿ.ಚೌಧರಿ 28, ವೈ.ವಿ.ರಾಥೋಡ್ ಬ್ಯಾಟಿಂಗ್ 44, ಭೂತೆ ಬ್ಯಾಟಿಂಗ್ 26; ವೈಶಾಖ್ ವಿ. 42 ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.