ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೇ ಟೆಸ್ಟ್ನ ಮೂರನೇ ದಿನವು ಪಂದ್ಯದ ಕೊನೆಯ ದಿನವಾಗಬಹುದೆಂದು ಭಾವಿಸಿ ಸುಮಾರು 30 ಸಾವಿರ ಮಂದಿ ಶುಕ್ರವಾರ ಇಲ್ಲಿನ ಎಂಸಿಎ ಕ್ರೀಡಾಂಗಣಕ್ಕೆ ಬಂದಿದ್ದರು.

ಇತಿಹಾಸದ ಭಾಗವಾಗಬೇಕೆಂದು ಬಯಸಿ ಈ ‘ಕ್ರಿಕೆಟ್ ಪೋಷಕರು’ ಬಿಸಿಲನ್ನೂ ಲೆಕ್ಕಿಸಲಿಲ್ಲ. ಭಾರತ ನಾಲ್ಕನೇ ಇನಿಂಗ್ಸ್ನಲ್ಲಿ 359 ರನ್ಗಳನ್ನು ಬೆನ್ನಟ್ಟಬಹುದೆಂಬ ಪ್ರಲೋಭನೆ ಅವರನ್ನು ಇಲ್ಲಿಗೆ ಸೆಳೆದಿತ್ತು. 2008ರಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 387 ರನ್ಗಳ ಬೃಹತ್ ಗುರಿಯನ್ನು ತಲುಪಿದ್ದು, ಈ ಎರಡನೇ ಅತಿ ದೊಡ್ಡ ಗುರಿಯನ್ನೂ ತಲುಪಬಹುದೆಂಬ ಆಸೆ ಅವರಲ್ಲಿತ್ತು.

ಆದರೆ ಪ್ರೇಕ್ಷಕರು ಬಯಸದೇ ಇದ್ದ ಇತಿಹಾಸದ ಭಾಗವಾದರು. ‘ಬೋನಸ್‘ ಎಂಬಂತೆ ಒಂದು ಯುಗದ ಅಂತ್ಯ ಕೂಡ ಕಾಣಬೇಕಾಯಿತು.

ಮಿಚೆಲ್ ಸ್ಯಾಂಟನರ್ (104ಕ್ಕೆ6) ಅವರ ಅಮೋಘ ದಾಳಿಗೆ ಸಿಲುಕಿ ಭಾರತ ಎರಡನೇ ಇನಿಂಗ್ಸ್ನಲ್ಲಿ 245 ರನ್ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಮೂರೇ ದಿನದಲ್ಲಿ 113 ರನ್ಗಳ ಜಯಪಡೆಯಿತು. ಕ್ರೀಡಾಂಗಣದಲ್ಲಿದ್ದ ಬೃಹತ್ ಪರದೆಯಲ್ಲಿ ನ್ಯೂಜಿಲೆಂಡ್ ಸರಣಿಯನ್ನು 2–0 ಯಿಂದ ಗೆದ್ದಿತು ಎಂಬ ಸಾಲುಗಳು ಮೂಡಿದವು.

2012ರ ನಂತರ ಭಾರತ ಇದೇ ಮೊದಲ ಬಾರಿ ತವರಿನಲ್ಲಿ ಸರಣಿ ಸೋತಿತು. ನ್ಯೂಜಿಲೆಂಡ್, ಇದೇ ಮೊದಲ ಬಾರಿ ಭಾರತದ ನೆಲದಲ್ಲಿ ಸರಣಿ ಜಯದ ಸಂಭ್ರಮ ಅನುಭವಿಸಿತು.

ಭಾರತ ಆಡುತ್ತಿರುವ ರೀತಿ ನೋಡಿದರೆ, ಮುಂಬೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಕೂಡ ಅದರ ಪಾಲಿಗೆ ಕಠಿಣವಾಗುವಂತೆ ಕಾಣುತ್ತಿದೆ. ಈ ಹಿಂದೆಯೂ ನ್ಯೂಜಿಲೆಂಡ್ ಭಾರತಕ್ಕೆ ತಲೆನೋವಾಗಿದ್ದುದು ಇದೆ. ಆದರೆ ಈ ಬಾರಿ ಮೂರೂ ದಿನ ಅದು ಪ್ರಾಬಲ್ಯ ಮೆರೆಯಿತು.

ಮೊದಲನೆಯದಾಗಿ ಮಹತ್ವದ ಟಾಸ್ ಸೋತಿತು. ಆದರೆ ಅದು ಭಾರತದ ಕೈಲಿರಲಿಲ್ಲ. ಎರಡನೆಯದಾಗಿ ವಾಷಿಂಗ್ಟನ್ ಸುಂದರ್ ಅವರು ಏಳು ವಿಕೆಟ್ಗಳ ಗೊಂಚಲು ಪಡೆದಾಗ, ಇತರೆ ಬೌಲರ್ಗಳ ಬೆಂಬಲ ಸಾಲಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ನೂರಕ್ಕಿಂತ ಹೆಚ್ಚು ಮುನ್ನಡೆ ಪಡೆಯಿತು. ಮೂರನೆಯದಾಗಿ ನ್ಯೂಜಿಲೆಂಡ್ನ ಸಾಧಾರಣ ಸ್ಪಿನ್ ದಾಳಿಯ ಎದುರು ಭಾರತದ ಅನುಭವಿ ಆಟಗಾರರು ವೃತ್ತಿಪರರಂತೆ ಆಡಲಿಲ್ಲ. ಭಾರತ ಬರೇ 156ಕ್ಕೆ ಆಲೌಟ್ ಆಯಿತು.

ನಾಲ್ಕನೆಯದಾಗಿ ಎರಡನೇ ಇನಿಂಗ್ಸ್ನಲ್ಲೂ ಭಾರತದ ಬೌಲಿಂಗ್ ಬಿಗಿಯಾಗಿರಲಿಲ್ಲ. ಹೀಗಾಗಿ ಪ್ರವಾಸಿಗರು 255 ರನ್ಗಳ ಮೊತ್ತ ಗಳಿಸಿ ಆತಿಥೇಯರಿಗೆ 359 ರನ್ಗಳ ಕಠಿಣ ಸವಾಲೆಸೆದರು.

ಇವೆಲ್ಲದರ ನಂತರ ಭಾರತದ ಆಟಗಾರು ಎರಡನೇ ಇನಿಂಗ್ಸ್ನಲ್ಲಿ ವಿಶ್ವಾಸದಿಂದ ಆಡಲಿಳಿದರು. ಪ್ರೇಕ್ಷಕರೂ ಬೆಂಬಲವೂ ಬೆನ್ನಿಗಿತ್ತು. ಅದಕ್ಕೆ ತಕ್ಕಂತೆ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ (77, 65ಎ, 93 ನಿ) ಉತ್ತಮ ಹೊಡೆತಗಳನ್ನು ಪ್ರದರ್ಶಿಸಿದರು. ಲಂಚ್ ವೇಳೆಗೆ ಭಾರತದ ಮೊತ್ತ 12 ಓವರುಗಳಲ್ಲಿ 1 ವಿಕೆಟ್ಗೆ 81 ರನ್.

ಆದರೆ ಈ ವಿಶ್ವಾಸ ಹೆಚ್ಚು ಹೊತ್ತು ಉಳಿಯಲಿಲ್ಲ. ಮುಂದಿನ 10 ಓವರುಗಳಲ್ಲಿ ಗಿಲ್ ಮತ್ತು ಜೈಸ್ವಾಲ್ ಅವರ ವಿಕೆಟ್ಗಳು ಉರುಳಿದವು. ಸ್ಯಾಂಟನರ್ ಬೌಲಿಂಗ್ನಲ್ಲಿ ಜೈಸ್ವಾಲ್, ಸ್ಲಿಪ್ನಲ್ಲಿದ್ದ ಡೇರಿಲ್ ಮಿಚೆಲ್ಗೆ ಕ್ಯಾಚ್ ನೀಡಿದರು. ಇದು ಅವರಿಗೆ ಇನಿಂಗ್ಸ್ನ ಮೂರನೇ ವಿಕೆಟ್ ಆಯಿತು.

ಹೀಗಾಗಿ ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ತಮ್ಮ ಸಾಮರ್ಥ್ಯ ತೋರಲು ವೇದಿಕೆ ಸಿದ್ಧವಾಗಿತ್ತು. ಆದರೆ ಅವರ ಆಟದಲ್ಲಿ (17, 40ಎ) ವೈಭವ ಮರೆಯಾದಂತೆ ಇತ್ತು. ಸ್ಯಾಂಟನರ್ ಬೌಲಿಂಗ್ನಲ್ಲಿ ಅವರು ಎಲ್ಬಿ ಬಲೆಗೆ ಬಿದ್ದರು. ಇದರ ಮರುಪರಿಶೀಲನೆ ಕೇಳಿದರೂ ಪ್ರಯೋಜನವಾಗಲಿಲ್ಲ. ಅಲ್ಲಿಂದ ಗೆಲುವಿನ ಆಸೆ ಸಂಪೂರ್ಣ ಕರಗಿತು.

ಕೊಹ್ಲಿ ಅವರಂತೆ ಇಡೀ ತಂಡವೂ ಸ್ವಲ್ಪ ‘ದಣಿದಂತೆ‘ ಕಾಣುತಿತ್ತು. ಅಜೇಯ ತಂಡವೆಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಕನ ಮಾಡಿಕೊಳ್ಳಲೂ ಇದು ಸಕಾಲ. ಈಗೇನೂ ಕೆಲವು ತಾರೆಗಳು ತಂಡದಲ್ಲಿದ್ದಾರೆ. ಆದರೆ ತವರಿನಲ್ಲಿ ನಡೆಯುವ ಮುಂದಿನ ಸರಣಿಯಲ್ಲಿ ಅವರಲ್ಲಿ ಕೆಲವರು ಉಳಿದುಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ ಇದು ಯುಗದ ಅಂತ್ಯದಂತೆ ಭಾಸವಾಗುತ್ತಿದೆ.

ಅಗ್ರಸ್ಥಾನದಲ್ಲಿದ್ದರೂ ಆತಂಕ...

ದುಬೈ: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಹೊರತಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಭಾರತ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆದರೆ ಈ ಸೋಲು, ತಂಡದ ಶೇಕಡಾವಾರು ಅಂಕದ (ಪಿಸಿಟಿ) ಮೇಲೆ ಪರಿಣಾಮ ಬೀರಿದೆ.

ಭಾರತಕ್ಕೆ ಹಾಲಿ ಡಬ್ಲ್ಯುಟಿಸಿ ವರ್ಷದಲ್ಲಿ ಇದು ನಾಲ್ಕನೇ ಸೋಲು. ಪಿಸಿಟಿ ಪ್ರಮಾಣ ಶೇ 68.06 ರಿಂದ 62.82ಕ್ಕೆ ಇಳಿದಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕಿಂತ ರೋಹಿತ್ ಪಡೆ ಬರೇ 0.32 ಅಂಕಗಳಿಂದ ಮುಂದಿದೆ.

ಬೇರೆ ತಂಡಗಳ ಫಲಿತಾಂಶ ಅವಲಂಬಿಸದೇ, ಸತತ ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್ ತಲುಪಬೇಕಾದರೆ, ಭಾರತ ಈಗ ಉಳಿದಿರುವ ಆರು ಟೆಸ್ಟ್ (ನ್ಯೂಜಿಲೆಂಡ್ ವಿರುದ್ಧ ಒಂದು, ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು) ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಲೇಬೇಕಾಗುತ್ತದೆ

ಈ ಸರಣಿಗೆ ಮೊದಲು 18 ಸರಣಿಗಳನ್ನು ಸತತವಾಗಿ ಗೆದ್ದಿದ್ದ ಭಾರತ ಡಬ್ಲ್ಯುಟಿಸಿ ಫೈನಲ್ ತಲುಪುವ ನೆಚ್ಚಿನ ತಂಡವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.