ಕರಾಚಿ: ’ಇಂಗ್ಲಿಂಷ್ ಕೌಂಟಿ ಕ್ರಿಕೆಟ್‌ನಲ್ಲಿ 2012ರಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಬುಕ್ಕಿಯ ಪರಿಚಯ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಇತ್ತು’ ಎಂದು ನಿಷೇಧಕ್ಕೆ ಒಳಗಾಗಿರುವ ಆಟಗಾರ ದನೀಶ್ ಕನೇರಿಯಾ ಆರೋಪಿಸಿದ್ದಾರೆ.

‘ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ‘ಆ’ ಬುಕ್ಕಿ ಆಗಾಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಆತನಿಗೆ ಆಹ್ವಾನ ನೀಡುತ್ತಿತ್ತು' ಎಂದೂ ಅವರು ಯು ಟ್ಯೂಬ್ ಚಾನಲ್ ಮೂಲಕ ಹೇಳಿದ್ದಾರೆ.

‘ಸತ್ಯ ಹೇಳಲು ಅವಕಾಶ ಸಿಕ್ಕಿದಾಗ ಕೆಲವರು ನಿಜವನ್ನು ತಮಗೆ ಬೇಕಾದಂತೆ ತಿರುಚಿ ಹೇಳುತ್ತಾರೆ. ಇಂಥವರಿಂದಾಗಿ ನಾನು ಸದಾ ತೊಂದರೆಗೆ ಒಳಗಾಗಿದ್ದೇನೆ. ನನ್ನನ್ನು ಬುಕ್ಕಿಗೆ ಪರಿಚಯ ಮಾಡಿದವರು ಯಾರು ಎಂಬ ಪ್ರಶ್ನೆ ಉತ್ತರ ಸಿಗದೇ ಉಳಿದಿದೆ. ಆದರೆ ನನ್ನ ಪ್ರಕರಣ ಸಮಾಜದ ಮುಂದೆ ಈಗಲೂ ಮುಕ್ತವಾಗಿಯೇ ಇದೆ’ ಎಂದು ಕನೇರಿಯಾ ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.