ದುಬೈ: ‘ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಅವರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ, ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ನನ್ನ ಅಭಿಪ್ರಾಯ ಭಿನ್ನವಾಗಿತ್ತು’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್.ಅಶ್ವಿನ್, ಇತ್ತೀಚಿಗೆ ಮಾರ್ಗನ್ ಅವರೊಂದಿಗೆ ಮೈದಾನದಲ್ಲಿ ನಡೆದಿದ್ದ ಮಾತಿನ ಚಕಮಕಿ ವಿವಾದಕ್ಕೆ ಅಂತ್ಯವಾಡಲು ಪ್ರಯತ್ನಿಸಿದ್ದಾರೆ.

ಕಳೆದ ವಾರ ನಡೆದ ಕೋಲ್ಕತ್ತ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಕ್ರೀಡಾಸ್ಫೂರ್ತಿಯನ್ನು ಮೆರೆದಿಲ್ಲ ಎಂದು ಮಾರ್ಗನ್ ಆರೋಪಿಸಿದ್ದರು. ಇದು ಪರ -ವಿರೋಧ ಚರ್ಚೆಗೆ ಗ್ರಾಸವಾಗಿತ್ತು.

ವಿವಾದ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಶ್ವಿನ್, ‘ಫೀಲ್ಡರ್ ಚೆಂಡನ್ನು ಥ್ರೋ ಮಾಡಿದಾಗ ನಾನು ಓಡಲು ಪ್ರಾರಂಭಿಸಿದ್ದೆ. ಚೆಂಡು ರಿಷಭ್ ಪಂತ್ ಅವರಿಗೆ ಬಡಿದಿದೆ ಎಂಬುದು ಗೊತ್ತಿರಲಿಲ್ಲ. ಖಂಡಿತವಾಗಿಯೂ ನಾನದನ್ನು ಗಮನಿಸಿದ್ದರೂ ಓಡುತ್ತಿದ್ದೆ. ಯಾಕೆಂದರೆ ನಿಮಯವು ಸಮ್ಮತಿಸುತ್ತದೆ. ಮಾರ್ಗನ್ ಹೇಳಿದಂತೆ ನಾನು ಅವಮಾನ ಮಾಡಿದ್ದೇನೆಯೇ? ಖಂಡಿತವಾಗಿಯೂ ಇಲ್ಲ’ ಎಂದು ಉತ್ತರಿಸಿದ್ದರು.

ಇದನ್ನೂ ಓದಿ... ಮಹಿ ಭಾಯ್ ನೋಡುತ್ತಾ ಕ್ರಿಕೆಟ್ ಆರಂಭಿಸಿದೆ, ಅವರಂತೆ ಫಿನಿಶರ್ ಆಗುವ ಆಸೆ: ರಿಪಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.