ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2023: ಸಮಯ ಕಳೆಯಲು ಅಂಪೈರ್ ಜೊತೆ ಧೋನಿ ಚಕಮಕಿ– ನೆಟ್ಟಿಗರ ಆಕ್ರೋಶ

Published 24 ಮೇ 2023, 5:08 IST
Last Updated 24 ಮೇ 2023, 5:08 IST
ಅಕ್ಷರ ಗಾತ್ರ

ಚೆನ್ನೈ: ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ, 10ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐ‍ಪಿಎಲ್ ಫೈನಲ್‌ಗೆ ಕೊಂಡೊಯ್ಯುವಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಶಸ್ವಿಯಾಗಿದ್ದಾರೆ. ಆದರೆ, ಈ ಪಂದ್ಯದಲ್ಲಿ ಧೋನಿ ನಡೆದುಕೊಂಡ ರೀತಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಧೋನಿ ಎಂದಿನಂತೆ ಆನ್‌ಫೀಲ್ಡ್ ನಿರ್ಧಾರಗಳ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಆದರೆ, ಒಂದು ಹಂತದಲ್ಲಿ ಅಂಪೈರ್ ಜೊತೆ ನಡೆದುಕೊಂಡ ರೀತಿ ಬಗ್ಗೆ ಕೆಲ ದಿನಗಳ ಹಿಂದೆ ತಮ್ಮ ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರವನ್ನು ತೆಗೆದುಕೊಂಡಿದ್ದ ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್, ವೀಕ್ಷಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ.

ಗುಜರಾತ್ ಟೈಟನ್ಸ್ ಚೇಸಿಂಗ್ ಸಂದರ್ಭ 15ನೇ ಓವರಿಗೂ ಮುನ್ನ ಈ ಘಟನ ನಡೆದಿದೆ. ಧೋನಿ ಅಂಪೈರ್‌ಗಳೊಂದಿಗೆ ಯಾವುದೋ ವಿಷಯಕ್ಕೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತು. ಆರಂಭದಲ್ಲಿ ಯಾವ ವಿಷಯ ಎಂಬುದು ತಿಳಿದುಬರಲಿಲ್ಲ. ಆ ಬಳಿಕ, ಧೋನಿ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ತಂತ್ರ ಮಾಡಿದರು ಎಂಬುದನ್ನು ಅನೇಕರು ಗಮನಿಸಿದ್ದಾರೆ.

ಮೈದಾನದ ಹೊರಗಿದ್ದ ವೇಗಿ ಮಥೀಶಾ ಪತಿರಾಣ ಒಳಪ್ರವೇಶಿಸುತ್ತಿದ್ದಂತೆ ಧೋನಿ ಅವರಿಂದ ಬೌಲ್ ಮಾಡಿಸಲು ಮುಂದಾಗಿದ್ದರು. ಆದರೆ, ಪತಿರಾಣ ಮೈದಾನದಿಂದ ಹೊರಗಿದ್ದಷ್ಟೇ ಸಮಯ ಮೈದಾನ ಒಳಗೆ ಇಲ್ಲದ ಕಾರಣ ಅಂಪೈರ್ ಬೌಲಿಂಗ್‌ಗೆ ಅವಕಾಶ ನೀಡಲಿಲ್ಲ. ಇದರಿಂದ ವಿಚಲಿತರಾದ ನಾಯಕ ಧೋನಿ ಅಂಪೈರ್ ಜೊತೆ ತಮ್ಮ ತಂಡದ ಇತರ ಆಟಗಾರರನ್ನು ಸೇರಿಸಿಕೊಂಡು ಪತಿರಾಣಗೆ ಬೌಲಿಂಗ್‌ಗೆ ಅವಕಾಶ ಸಿಗುವವರೆಗೂ ಜಾಣತನದಿಂದ 4 ನಿಮಿಷ ಮಾತುಕತೆ ನಡೆಸಿದರು.

‘ನೀವು ಅಂಪೈರ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೀರಿ. ಕೆಲವೊಮ್ಮೆ ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಅಂಪೈರ್ ತಪ್ಪು ನಿರ್ಧಾರ ಮಾಡಿದರೂ ಸಹ ಒಪ್ಪಿಕೊಳ್ಳುತ್ತೀರಿ’ಎಂದು ಮಾರ್ಮಿಕವಾಗಿ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ಪತಿರಾಣ ಅವರು 9 ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗಿದ್ದರು. ಇದ್ದಕ್ಕಿದ್ದಂತೆ ಬೌಲಿಂಗ್ ಮಾಡಲು ಬಂದರು. ಇಲ್ಲಿ ನಿಯಮವೆಂದರೆ ಪತಿರಾಣ ಅವರು ಬೌಲ್ ಮಾಡಲು ಮೈದಾನದಲ್ಲಿ ಕನಿಷ್ಠ 9 ನಿಮಿಷಗಳನ್ನು ಕಳೆಯಬೇಕು ಹೀಗಿದ್ದರೂ ಧೋನಿ ಅಂಪೈರ್‌ಗಳೊಂದಿಗೆ ಮಾತನಾಡುತ್ತಿರುವುದೇನು? ಇದು ಖಂಡಿತಾ ಸ್ವೀಕಾರಾರ್ಹವಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ.

ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸೋತಿದ್ದರೂ ಸಹ ಫೈನಲ್‌ನಲ್ಲಿ ಸಿಎಸ್‌ಕೆಗೆ ಎದುರಾಗಲು ಅವರಿಗೆ ಮತ್ತೊಂದು ಅವಕಾಶವಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್, ಎಲಿಮಿಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಕ್ವಾಲಿಫೈಯರ್–2ನಲ್ಲಿ ಆಡುತ್ತದೆ. ಅಲ್ಲಿ ಗೆದ್ದರೆ ಫೈನಲ್‌ಗೆ ಲಗ್ಗೆ ಇಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT