ನವದೆಹಲಿ: ಮೂರು ವರ್ಷಗಳ ನಂತರ ಮತ್ತೆ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಈ ವರ್ಷ ಆರಂಭಿಸಲಾಗುತ್ತಿದೆ.

ಸೆಪ್ಟೆಂಬರ್ 8 ರಿಂದ 25ರವರೆಗೆ ಟೂರ್ನಿಯು ನಡೆಯಲಿದೆ. ಹಳೆಯ ಮಾದರಿಯಲ್ಲಿಯೇ ಮುಂದುವರಿಸಲಾಗುತ್ತಿದೆ. ಈ ಟೂರ್ನಿಯೊಂದಿಗೆ ವರ್ಷದ ದೇಶಿ ಕ್ರಿಕೆಟ್ ಋತುವೂ ಆರಂಭವಾಗಲಿದೆ. ಪುರುಷರ ಹಾಗೂ ಮಹಿಳಾ ವಿಭಾಗಗಳ ಟೂರ್ನಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಬಿಡುಗಡೆ ಮಾಡಿದೆ.

‘ದಿಲೀಪ್ ಟ್ರೋಫಿ ಟೂರ್ನಿಯಲ್ಲಿ ಆರು ವಲಯ ತಂಡಗಳು (ಉತ್ತರ, ದಕ್ಷಿಣ, ಕೇಂದ್ರ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ) ಆಡಲಿವೆ. ಇರಾನಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಏಕದಿನ ಹಾಗೂ ರಣಜಿ ಟ್ರೋಫಿ ಟೂರ್ನಿಗಳು ನಡೆಯಲಿವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ದೇಶಿ ಕ್ರಿಕೆಟ್ ಚಟುವಟಿಕೆಗಳಿಗೆ ತಡೆ ಬಿದ್ದಿತ್ತು. ಹೋದ ಋತುವಿನಲ್ಲಿ ರಣಜಿ ಟ್ರೋಫಿ ಆಯೋಜಿಸಲಾಗಿತ್ತು.

ಪಟ್ಟಿ

ಟೂರ್ನಿ;ದಿನಾಂಕ

ಪುರುಷರು

ದಿಲೀಪ್ ಟ್ರೋಫಿ; ಸೆ 8 ರಿಂದ 25

ಇರಾನಿ ಕಪ್;ಅ 1 ರಿಂದ 5

ಸೈಯದ್ ಮುಷ್ತಾಕ್ ಅಲಿ ಟಿ20; ಅ 11ರಿಂದ ನ 5

ವಿಜಯ್ ಹಜಾರೆ ಏಕದಿನ; ನ 12 ರಿಂದ ಡಿ 8

ರಣಜಿ ಟ್ರೋಫಿ; ಡಿ 13 ರಿಂದ ಫೆ 20, 2023

ಮಹಿಳೆಯರು

ರಾಷ್ಟ್ರೀಯ ಟಿ20; ಅ 11ರಿಂದ ನ 5

ಅಂತರ ವಲಯ ಟಿ20;ನ 8ರಿಂದ 15

ಚಾಲೆಂಜರ್ ಟಿ20; ನ 20ರಿಂದ26

ಅಂತರ ವಲಯ ಏಕದಿನ; ಫೆ 12 ರಿಂದ 21.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.