ಮುಂಬೈ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಅನಾರೋಗ್ಯದ ಕಾರಣ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಬಿಸಿಸಿಐ ರಾಷ್ಟ್ರೀಯ ಆಯ್ಕೆಸಮಿತಿಯು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ವಿಶ್ರಾಂತಿಯ ಅವಧಿಯನ್ನು ವಿಸ್ತರಿಸಿದೆ.

ಹೀಗಾಗಿ ಭಾಗವಹಿಸುವ ತಂಡಗಳಲ್ಲಿ ಮಂಗಳವಾರ ಅಲ್ಪ ಬದಲಾವಣೆಗಳನ್ನು ಮಾಡಲಾಗಿದೆ.

ಸೆಪ್ಟೆಂಬರ್ 5 ರಿಂದ 8ರವರೆಗೆ ಮೊದಲ ಸುತ್ತಿನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಭಾರತ ‘ಎ’ ಮತ್ತು ಭಾರತ ‘ಬಿ’ ನಡುವಣ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅನಂತಪುರದ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ‘ಸಿ’ ತಂಡವು, ಭಾರತ ‘ಡಿ’ ತಂಡವನ್ನು ಎದುರಿಸಲಿದೆ.

ಸಿರಾಜ್ ಮತ್ತು ಉಮ್ರಾನ್ ಮಲಿಕ್ ಅವರು ಮೊದಲ ಸುತ್ತಿನಲ್ಲಿ ಆಡುತ್ತಿಲ್ಲ. ಅವರ ಬದಲು ನವದೀಪ್ ಸೈನಿ ಮತ್ತು ಗೌರವ್ ಯಾದವ್ ಅವಕಾಶ ಪಡೆದಿದ್ದಾರೆ. ಸೈನಿ ಭಾರತ ‘ಬಿ’ ತಂಡದಲ್ಲಿ ಮತ್ತು ಯಾದವ್, ಭಾರತ ‘ಸಿ’ ತಂಡದಲ್ಲಿ ಕ್ರಮವಾಗಿ ಸಿರಾಜ್ ಮತ್ತು ಉಮ್ರಾನ್ ಬದಲು ಆಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯಪ್ರದೇಶ ಮೂಲದ 32 ವರ್ಷ ವಯಸ್ಸಿನ ಯಾದವ್ ಪಾಂಡಿಚೇರಿ ಪರ ಆಡಿ ಕಳೆದ ರಣಜಿ ಋತುವಿನಲ್ಲಿ 7 ಪಂದ್ಯಗಳಿಂದ 41 ವಿಕೆಟ್ ಪಡೆದಿದ್ದರು. ಎರಡನೇ ಅತ್ಯಧಿಕ ವಿಕೆಟ್ ಗಳಿಕೆದಾರ ಎನಿಸಿದ್ದರು.

ಭಾರತ ‘ಬಿ’ ತಂಡದಲ್ಲಿದ್ದ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.