ಲಖನೌ: ಅಭಿಮನ್ಯು ಈಶ್ವರನ್ ಅವರ ಅಮೋಘ ಶತಕದ ಬಲದಿಂದ ರೆಸ್ಟ್ ಆಫ್ ಇಂಡಿಯಾ ತಂಡವು ಇಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ತಂಡದ ಸವಾಲಿಗೆ ದಿಟ್ಟ ಪ್ರತ್ಯುತ್ತರ ನೀಡಿದೆ.

ಮುಂಬೈ ಬಳಗವು ಮೊದಲ ಇನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ (222 ರನ್) ಅವರ ದ್ವಿಶತಕದ ಬಲದಿಂದ 141 ಓವರ್ಗಳಲ್ಲಿ 537 ರನ್ ಪೇರಿಸಿದೆ. ಅದಕ್ಕುತ್ತರವಾಗಿ ಮೂರನೇ ದಿನದಾಟದ ಅಂತ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡವು 74 ಓವರ್ಗಳಲ್ಲಿ 4 ವಿಕೆಟ್ಗಳಿಗೆ 289 ರನ್ ಗಳಿಸಿದೆ. ಇನಿಂಗ್ಸ್ ಆರಂಭದಲ್ಲಿಯೇ ನಾಯಕ ಋತುರಾಜ್ ಗಾಯಕವಾಡ (9 ರನ್) ಔಟಾದರು. ಇದರಿಂದಾಗಿ ತಂಡದ ಮೇಲೆ ಉಂಟಾದ ಒತ್ತಡವನ್ನು ಅಭಿಮನ್ಯು ಸಮರ್ಥವಾಗಿ ನಿಭಾಯಿಸಿದರು. ಅಭಿಮನ್ಯು (ಬ್ಯಾಟಿಂಗ್ 151; 212ಎ, 4X12, 6X1) ತಂಡದ ಮರುಹೋರಾಟಕ್ಕೆ ಮರುಜೀವ ತುಂಬಿದರು. ಅವರು ಮತ್ತು ಧ್ರುವ ಜುರೇಲ್ (ಬ್ಯಾಟಿಂಗ್ 30) ಕ್ರೀಸ್ನಲ್ಲಿದ್ದಾರೆ.

ಸಾಯಿ ಸುದರ್ಶನ್ (32 ರನ್), ದೇವದತ್ತ ಪಡಿಕ್ಕಲ್ (16 ರನ್) ಮತ್ತು ಇಶಾನ್ ಕಿಶನ್ (38 ರನ್) ದೀರ್ಘ ಇನಿಂಗ್ಸ್ ಆಡುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಮುಂಬೈ: 141 ಓವರ್ಗಳಲ್ಲಿ 537 (ಸರ್ಫರಾಜ್ ಖಾನ್ ಅಜೇಯ 222, ಅಜಿಂಕ್ಯ ರಹಾನೆ 97, ಮುಕೇಶ್ ಕುಮಾರ್ 110ಕ್ಕೆ5, ಯಶ್ ದಯಾಳ್ 89ಕ್ಕೆ2, ಪ್ರಸಿದ್ಧಕೃಷ್ಣ 102ಕ್ಕೆ2)

ರೆಸ್ಟ್ ಆಫ್ ಇಂಡಿಯಾ: 74 ಓವರ್ಗಳಲ್ಲಿ 4ಕ್ಕೆ289 (ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 151, ಮೋಹಿತ್ ಅವಸ್ತಿ 66ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.