ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಅವರು ಭವಿಷ್ಯದಲ್ಲಿ ಅಮೆರಿಕ ತಂಡದಲ್ಲಿ ಆಡುವುದಾಗಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್ಡೌನ್ ಇದ್ದ ಕಾರಣ ಕ್ರಿಕೆಟ್ ಚಟುವಟಿಕೆಗಳು ನಡೆದಿರಲಿಲ್ಲ. ಈಚೆಗೆ ತರಬೇತಿಯನ್ನು ಮರು ಆರಂಭಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಯು 55 ಆಟಗಾರರಿಗೆ ಬುಲಾವ್ ಕೊಟ್ಟಿತ್ತು. ಆದರೆ ಆ ಪಟ್ಟಿಯಲ್ಲಿ ಪ್ಲಂಕೆಟ್ ಇರಲಿಲ್ಲ. ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಚೊಚ್ಚಲ ಪ್ರಶಸ್ತಿ ಜಯಿಸಲು ಪ್ಲಂಕೆಟ್ ಆಟವೂ ಪ್ರಮುಖವಾಗಿತ್ತು.

‘ಅಮೆರಿಕದಲ್ಲಿ ಕ್ರಿಕೆಟ್ ಆಡುವುದು ಕೂಡ ಒಂದು ಒಳ್ಳೆಯ ಅನುಭವವಾಗಲಿದೆ. ನಾನು ಇಂಗ್ಲೆಂಡ್ನವನು. ಸದಾ ಬ್ರಿಟಿಷ್ ಆಗಿರುತ್ತೇನೆ. ದೈಹಿಕ ಸಾಮರ್ಥ್ಯ ನಿರಂತರವಾಗಿದ್ದರೆ ದೀರ್ಘ ಕಾಲದವರೆಗೆ ಆಡಬಲ್ಲೆ’ ಎಂದಿದ್ದಾರೆ.

ಪ್ಲಂಕೆಟ್ ಅವರ ಪತ್ನಿಯು ಅಮೆರಿಕ ಮೂಲದವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.