ಲಂಡನ್: ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಇಂಗ್ಲೆಂಡ್ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ 250 ರನ್ಗಳ ಮುನ್ನಡೆ ಸಾಧಿಸಿದೆ. ಶತಕ ಗಳಿಸಿದ ಕ್ರಿಸ್ ವೋಕ್ಸ್ (ಔಟಾಗದೆ 120; 159 ಎಸೆತ, 18 ಬೌಂ) ಮತ್ತು ವಿಕೆಟ್ ಕೀಪರ್ ಜಾನಿ ಬೇಸ್ಟೊ (93; 144 ಎ, 12 ಬೌಂ) ಅವರ ಅಮೋಘ ಬ್ಯಾಟಿಂಗ್ ದಿನದಾಟಕ್ಕೆ ಮೆರುಗು ತುಂಬಿತು.

ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಸಂಪೂರ್ಣ ವಾಗಿ ಮಳೆಗೆ ಆಹುತಿಯಾಗಿತ್ತು. ಎರಡನೇ ದಿನವಾದ ಶುಕ್ರವಾರ ಆತಿ ಥೇಯರು ಭಾರತವನ್ನು 107 ರನ್ಗಳಿಗೆ ಆಲೌಟ್ ಮಾಡಿದ್ದರು. ಮೂರನೇ ದಿನ ಬೆಳಿಗ್ಗೆ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ನಿರಾ ಯಾಸವಾಗಿ ಆಡಿದರು.

ಆದರೆ ಮೊಹಮ್ಮದ್ ಶಮಿ ಅವರು ಪ್ರಮುಖ ವಿಕೆಟ್ಗಳನ್ನು ಕಬಳಿಸಿ ವಿರಾಟ್ ಕೊಹ್ಲಿ ಬಳಗದಲ್ಲಿ ಭರವಸೆ ಮೂಡಿಸಿದ್ದರು. ಆರಂಭಿಕ ಬ್ಯಾಟ್ಸ್ಮನ್ ಕೀಟನ್ ಜೆನಿಂಗ್ಸ್, ನಾಯಕ ಜೋ ರೂಟ್ ಮತ್ತು ಮಧ್ಯಮ ಕ್ರಮಾಂಕದ ಜೋಸ್ ಬಟ್ಲರ್ ವಿಕೆಟ್ ಶಮಿ ಕಬಳಿಸಿದ್ದರು. ಮೂವರೂ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ಭೋಜನ ವಿರಾಮದ ವೇಳೆ ಇಂಗ್ಲೆಂಡ್ ನಾಲ್ಕು ವಿಕೆಟ್ಗಳಿಗೆ 89 ರನ್ ಗಳಿಸಿತ್ತು. ಆದರೆ ಭೋಜನದ ನಂತರ ಬೇಸ್ಟೊ ಮತ್ತು ವೋಕ್ಸ್ ಪ್ರವಾಸಿ ತಂಡದ ಬೌಲರ್ಗಳನ್ನು ಕಾಡಿದರು. ನಿರಾತಂಕವಾಗಿ ಬ್ಯಾಟ್ ಬೀಸಿದ ಇವರಿಬ್ಬರು ಆರನೇ ವಿಕೆಟ್ಗೆ 189 ರನ್ ಸೇರಿಸಿದರು. ಕ್ರಿಸ್ ವೋಕ್ಸ್ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು.

ಪಾಂಡ್ಯ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿ ಬೇಸ್ಟೊ ಮರಳಿದರು. ನಂತರ ಬಂದ ಸ್ಯಾಮ್ ಕರನ್ 24 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 22 ರನ್ ಸೇರಿಸಿ ಒಟ್ಟಾರೆ ಮುನ್ನಡೆಯನ್ನು 250 ರನ್ಗಳಿಗೆ ಏರಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರು:
ಭಾರತ, ಮೊದಲ ಇನಿಂಗ್ಸ್: 107
ಇಂಗ್ಲೆಂಡ್, ಮೊದಲ ಇನಿಂಗ್ಸ್: 81 ಓವರ್ಗಳಲ್ಲಿ 6ಕ್ಕೆ257 (ಪಾಪ್ 28, ಜಾನಿ ಬೇಸ್ಟೊ 93, ಜೋಸ್ ಬಟ್ಲರ್ 24, ಕ್ರಿಸ್ ವೋಕ್ಸ್ ಔಟಾಗದೆ 120, ಸ್ಯಾಮ್ ಕರನ್ ಔಟಾಗದೆ 22; ಇಶಾಂತ್ ಶರ್ಮಾ 88ಕ್ಕೆ1, ಮೊಹಮ್ಮದ್ ಶಮಿ 74ಕ್ಕೆ3, ಹಾರ್ದಿಕ್ ಪಾಂಡ್ಯ 66ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.