ಬೆಂಗಳೂರು: ಪ್ರಬುದ್ಧ ನಾಯಕನಾಗಿ ಬೆಳೆಯಲು ಮಹೇಂದ್ರ ಸಿಂಗ್ ಧೋನಿ ಕೂಡ ನನಗೆ ಸಹಾಯ ಮಾಡಿದರು, ಅವರೊಬ್ಬ ಅತ್ಯುತ್ತಮ ತಂತ್ರಗಾರ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿ ಹೇಳಿದರು.

ಐಪಿಎಲ್‌ನ ಆರ್‌ಸಿಬಿ ತಂಡದ ಪಾಡ್‌ಕಾಸ್ಟ್‌ನಲ್ಲಿ ಬುಧವಾರ ಅವರು ಮಾತನಾಡಿದರು.

’ನನ್ನ ಕ್ರಿಕೆಟ್ ಜೀವನದಲ್ಲಿ ನಾನು ನಾನಾಗಿರಲು ಮಾತ್ರ ಸಾಧ್ಯ. ಅಲ್ಲದೇ ನನ್ನನ್ನು ಪ್ರಭಾವಿಸಿದ ಅತ್ಯುತ್ತಮ ನಾಯಕರಾದ ಎಂ.ಎಸ್.ಧೋನಿ, ಗ್ರೇಮ್ ಸ್ಮಿತ್ ಹಾಗೂ ಸ್ಟಿಫನ್ ಫ್ಲೆಮಿಂಗ್‌ರಂತಾಗಲು ಬಹಳ ಕಷ್ಟ’ ಎಂದರು.

’ನಾಯಕತ್ವದ ಗುಣ ಬೆಳೆಸುವುದರಲ್ಲಿ ನನಗೆ ಕ್ರಿಕೆಟ್‌ನ ಮಹಾನ್ ನಾಯಕರು ಮಾರ್ಗದರ್ಶನ ಮಾಡಿದ್ದಾರೆ. ಐಪಿಎಲ್ ಆವೃತ್ತಿಗೆ ನಾನು ಸೇರಿದ ಆರಂಭದಲ್ಲಿ ಸಿಎಸ್‌ಕೆ ಚೆನ್ನೈ ತಂಡದಲ್ಲಿದ್ದಾಗ, ಕೋಚ್ ಫ್ಲೆಮಿಂಗ್ ಅವರ ಪಕ್ಕ ಕುಳಿತುಕೊಳ್ಳುವ ಅವಕಾಶ ಸಿಕ್ಕಿತ್ತು. ಆಗೆಲ್ಲಾ ನಾಯಕತ್ವ ಬೆಳೆಸುವ ಕುರಿತು ಅವರ ಬಳಿ ಪ್ರಶ್ನೆ ಕೇಳುತ್ತಿದ್ದೆ. ನಾಯಕತನದ ವಿಚಾರದಲ್ಲಿ ಧೋನಿ ಅಗ್ರಗಣ್ಯರು. ವಿಶಿಷ್ಟ ತಂತ್ರಗಾರಿಕೆ ಹೆಣೆಯುವುದರಲ್ಲಿ ಧೋನಿ ಅವರ ಆಟ ನೋಡಿ ಕಲಿಯಬೇಕು’ ಎಂದು ಫಾಫ್ ಹೇಳಿದರು.

ಪ್ರಸ್ತುತ ಫಾಫ್ ಡು ಪ್ಲೆಸಿ ಅವರು ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.