ನವದೆಹಲಿ: ಇಂದೋರ್ ಮೂಲದ ಸಹೋದರಿಯರಾದ ನಿಧಿ ಭೂಲೆ ಮತ್ತು ರಿತಿಕಾ ಭೂಲೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂಪೈರ್ಗಳ ಪ್ಯಾನೆಲ್ನಲ್ಲಿ ಸ್ಥಾನ ಪಡೆದಿದ್ದಾರೆ.

2006ರಲ್ಲಿ ನಿಧಿ ಭಾರತ ಮಹಿಳಾ ತಂಡವನ್ನು ಒಂದು ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು. ಅವರ ತಂಗಿ ರಿತಿಕಾ ಮಧ್ಯಪ್ರದೇಶ ತಂಡದಲ್ಲಿ 31 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.

ಹೋದ ಜೂನ್ 10ರಿಂದ 13ರವರೆಗೆ ನಿವೃತ್ತ ಕ್ರಿಕೆಟಿಗರಿಗೆ ಅಂಪೈರಿಂಗ್ ಪರೀಕ್ಷೆಯನ್ನು ಬಿಸಿಸಿಐ ಆಯೋಜಿಸಿತ್ತು. ಒಟ್ಟು 150 ಅಂಕಗಳಿಗೆ 120ಕ್ಕಿಂತ ಹೆಚ್ಚು ಅಂಕ ಗಳಿಸುವುದು ಕಡ್ಡಾಯವಾಗಿತ್ತು. ನಿಧಿ ಮತ್ತು ರಿತಿಕಾ ಅವರು ಕ್ರಮವಾಗಿ 133.5 ಮತ್ತು 133 ಅಂಕಗಳನ್ನು ಗಳಿಸಿದ್ದರು.

ತಮಿಳುನಾಡಿನ ವಿ. ಕೃತಿಕಾ ಮತ್ತು ವಿದರ್ಭದ ಅಂಕಿತಾ ಗುಹಾ ಅವರೂ ಬಿಸಿಸಿಐ ರೆಫರಿ ಪ್ಯಾನಲ್ನಲ್ಲಿ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಬಿಸಿಸಿಐನಲ್ಲಿ ಮಹಿಳಾ ಅಂಪೈರ್ಗಳ ಸಂಖ್ಯೆಯು ಏಳಕ್ಕೇರಿದೆ.

ಅಂಪೈರಿಂಗ್ ಅರ್ಹತಾ ಪರೀಕ್ಷೆಯಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ನಿಖಿಲ್ ಪಾಟೀಲ (147 ಅಂಕ) ಅಗ್ರಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.