ಡೇವಿಡ್ ಮತ್ತು ನಾನು ತುಂಬ ಉತ್ತಮ ಸ್ನೇಹಿತರಾಗಿದ್ದೆವು. ಅವರೊಂದಿಗೆ ಬೌಲಿಂಗ್ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ವೈಯಕ್ತಿಕವಾಗಿಯೂ ನಾವು ಉತ್ತಮ ಸ್ನೇಹಿತರಾಗಿದ್ದೆವು. ಎರಡು ವರ್ಷಗಳ ಹಿಂದೆ ನಾವು ರುವಾಂಡಾ ದೇಶಕ್ಕೆ ಕ್ರಿಕೆಟ್ ಪ್ರವಾಸ ಮಾಡಿದ್ದೆವು. ಅವರು ಬೆಂಗಳೂರಿನಲ್ಲಿ ಅಕಾಡೆಮಿ ಆರಂಭಿಸಿದ್ದರು. ಅವರ ಸಾವಿನಿಂದ ಅಪಾರ ದುಃಖವಾಗಿದೆ.
–ದೊಡ್ಡಗಣೇಶ್, ಮಾಜಿ ಕ್ರಿಕೆಟಿಗ
ಆ ಸಮಯದಲ್ಲಿ ಬ್ಯಾಟರ್‌ಗಳು ಡೇವಿಡ್ ಎಸೆತಗಳನ್ನು ಎದುರಿಸಲು ಭಯಪಡುತ್ತಿದ್ದರು. ಅವರು ಪ್ರಯೋಗಿಸುತ್ತಿದ್ದ ಎಸೆತಗಳ ವೇಗ ಹಾಗಿತ್ತು. ರನ್ ಅಪ್ ಮತ್ತು ಆರ್ಮ್ ಸ್ಪೀಡ್ ಬಹಳ ಚುರುಕಾಗಿದ್ದವು. ಅವರ ರೌಂಡ್ ಆರ್ಮ್ ಆ್ಯಕ್ಷನ್‌ನಲ್ಲಿ ರಿವರ್ಸ್ ಸ್ವಿಂಗ್‌ಗಳೂ ಪರಿಣಾಮಕಾರಿಯಾಗಿದ್ದವು.