ಕರಾಚಿ: ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮಾನ್ ಕ್ರಿಸ್ ಗೇಲ್, ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ಅವರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯಲ್ಲಿ ಹರಾಜಾಗಲಿರುವ ವಿದೇಶಿ ಆಟಗಾರರಲ್ಲಿ ಪ್ರಮುಖರು. ಹರಾಜು ಭಾನುವಾರ ಲಾಹೋರ್‌ನಲ್ಲಿ ನಡೆಯಲಿದೆ.

ಡೇವಿಡ್ ಮಲಾನ್, ಮೋಯಿನ್ ಅಲಿ ಮತ್ತು ಕ್ರಿಸ್ ಜೋರ್ಡಾನ್ ಮುಂತಾದವರು ಇಂಗ್ಲೆಂಡ್‌ನಿಂದ, ಡ್ವೇನ್ ಬ್ರಾವೊ, ಶೆಲ್ಡನ್ ಕಾಟ್ರೆಲ್ ಮತ್ತಿರರರು ವೆಸ್ಟ್ ಇಂಡೀಸ್‌ನಿಂದ, ಮೊಹಮ್ಮದ್ ನಬಿ ಅಫ್ಗಾನಿಸ್ತಾನದಿಂದ, ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾದಿಂದ ಮತ್ತು ಕ್ರಿಸ್ ಲಿನ್ ಆಸ್ಟ್ರೇಲಿಯಾದಿಂದ ಬರಲಿರುವ ಇತರ ಆಟಗಾರರು.

ಫೆಬ್ರುವರಿ 20ರಂದು ಆರಂಭವಾಗಲಿರುವ ಲೀಗ್‌ನಲ್ಲಿ ಪಾಲ್ಗೊಳ್ಳಲು 400ಕ್ಕೂ ಹೆಚ್ಚು ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಗೇಲ್ 2017ರಲ್ಲಿ ಕರಾಚಿ ಕಿಂಗ್ಸ್ ತಂಡದಲ್ಲಿ, 2016ರಲ್ಲಿ ಲಾಹೋರ್ ಕಲಂದರ್ ತಂಡಗಳಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.