ಹುಬ್ಬಳ್ಳಿ: ಅಂತಿಮ ಹಣಾಹಣಿಯಲ್ಲಿ ಆತಿಥೇಯಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡಅಂಗವಿಕಲರ ಚೊಚ್ಚಲ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆತಿಥ್ಯದಲ್ಲಿನಡೆದ ಹತ್ತು ದಿನಗಳಟೂರ್ನಿಯ ಫೈನಲ್ ಪಂದ್ಯಮಂಗಳವಾರ ರಾತ್ರಿ ನಡೆಯಿತು.

ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು. ಸವಾಲಿನ ಗುರಿಯ ಎದುರು ಪರದಾಡಿದ ಆತಿಥೇಯರು ನಿಗದಿತ ಓವರ್ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ತನ್ನ ಹೋರಾಟ ಮುಗಿಸಿದರು. ಭಾರತಕ್ಕೆ ಎಸ್. ರವೀಂದ್ರ (53) ಅರ್ಧಶತಕ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಟೂರ್ನಿಯಲ್ಲಿಭಾರತ, ಇಂಗ್ಲೆಂಡ್, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಂಡಿದ್ದವು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ನರೇಂದ್ರ ಮಂಗೋರೆ ಮತ್ತುಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಜಿತೇಂದ್ರ ವಡ್ಡಿ ಚಾಂಪಿಯನ್ ತಂಡದಲ್ಲಿದ್ದರು.

‘ಚೊಚ್ಚಲ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದಾಗಿತ್ತು. ಅಂತಿಮವಾಗಿ ಇದನ್ನು ಸಾಧಿಸಿ ತೋರಿಸಿತು. ಲೀಗ್ ಹಂತದ ಮೊದಲ ಪಂದ್ಯದಿಂದಲೂ ನಮ್ಮ ತಂಡ ನೀಡಿದ ಪ್ರದರ್ಶನ, ತೋರಿದ ಸಾಂಘಿಕ ಹೋರಾಟಕ್ಕೆ ಈಗ ಪ್ರಶಸ್ತಿ ಸಿಕ್ಕಿದೆ’ ಎಂದು ಭಾರತ ಅಂಗವಿಕಲರ ತಂಡದ ಲಾಜಿಸ್ಟಿಕ್ ಮ್ಯಾನೇಜರ್ ಹುಬ್ಬಳ್ಳಿಯ ಶಿವಾನಂದ ಗುಂಜಾಳ ಇಂಗ್ಲೆಂಡ್ನಿಂದ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.