ಮುಂಬೈ: ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ ಪಂದ್ಯಗಳಲ್ಲಿ ಸುಸ್ತಾದಂತೆ ಮತ್ತು ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ. ಅವರ ನಾಯಕತ್ವದಡಿ ಮುಂಬೈ ಇಂಡಿಯನ್ಸ್ ತಂಡವೂ ಗೊಂದಲದಲ್ಲಿದ್ದಂತೆ ಕಾಣುತ್ತಿದೆ ಎಂದು ಮಾಜಿ ಕ್ರಿಕೆಟಿಗರಾದ ಆರನ್ ಫಿಂಚ್ ಮತ್ತು ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಎಂಟನ್ನು ಸೋತಿದ್ದು, ಪ್ಲೇ ಆಫ್ನಿಂದ ಬಹುತೇಕ ಹೊರಬಿದ್ದಿದೆ. ಶುಕ್ರವಾರ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂದ್ಯವನ್ನು ಮುಂಬೈ 24 ರನ್ಗಳಿಂದ ಸೋತ ನಂತರ ಪಾಂಡ್ಯ ವಿರುದ್ಧ ವಾಂಖೆಡೆ ಕ್ರೀಡಾಂಗಣದ ಪ್ರೇಕ್ಷಕರು ಘೋಷಣೆಗಳನ್ನು ಕೂಗಿದರು.

ಪಾಂಡ್ಯ ಔಟಾಗುವ ಮೊದಲು ಕೇವಲ ಎರಡು ಎಸೆತಗಳನ್ನಷ್ಟೇ ಆಡಿದ್ದರು. ‘ಪಾಂಡ್ಯ ಬಳಲಿದಂತೆ ಕಾಣುತ್ತಿದ್ದಾರೆ. ಅವರು ಒತ್ತಡ ಅನುಭವಿಸುತ್ತಿದ್ದಾರೆ. ನನಗೂ ಈ ರೀತಿ ಆಗಿದೆ. ವೈಯಕ್ತಿಕವಾಗಿ ಏನೇ ಮಾಡಲು ಹೋದರೂ ಅದು ಯಶಸ್ಸು ಕೊಡುವುದಿಲ್ಲ’ ಎಂದು ಫಿಚ್ ಸ್ಟಾರ್ ಸ್ಪೋರ್ಟ್ಸ್ಗೆ ಹೇಳಿದರು.

‘ಪಾಂಡ್ಯ ನೇತೃತ್ವದಲ್ಲಿ ಮುಂಬೈ ತಂಡ ಗೊಂದಲದಲ್ಲಿರುವಂತೆ ಕಾಣುತ್ತಿದೆ. ಬ್ಯಾಟಿಂಗ್ ಕ್ರಮಾಂಕ ನೋಡಿದಾಗಲೂ ಹೀಗೇ ಅನಿಸುತ್ತದೆ’ ಎಂದುಹೇಳಿದರು. ‘ತಿಲಕ್ ವರ್ಮಾ ಮತ್ತು ನಮನ್ ಧೀರ್ ಮಧ್ಯಮ ಕ್ರಮಾಂಕದಲ್ಲಿ ಹೋರಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಕ್ರಮಾಂಕ ಬದಲಾಗುತ್ತಲೇ ಇದೆ’ ಎಂದು ಸ್ಮಿತ್ ಹೇಳಿದರು.

ಪಾಂಡ್ಯ ಅವರ ನಾಯಕತ್ವ ನಿಭಾವಣೆ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಉಪನಾಯಕ ಶೇನ್ ವ್ಟಾಟ್ಸನ್ ಕೂಡ ಟೀಕಿಸಿದ್ದಾರೆ. ‘ಕೆಕೆಆರ್ 57ಕ್ಕೆ5 ವಿಕೆಟ್ ಕಳೆದುಕೊಂಡಾಗ ತಂಡದ ಅತ್ಯುತ್ತಮ ಬೌಲರ್ ಅವರನ್ನು ಬಳಸಲಿಲ್ಲ. ಎದುರಾಳಿಗೆ ಚೇತರಿಸಲು ಅವಕಾಶ ಮಾಡಿಕೊಟ್ಟಿತು’ ಎಂದು ಅವರು ಜಿಯೊ ಸಿನಿಮಾ ಆ್ಯಪ್ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.