ಚಟ್ಟೊಗ್ರಾಮ್ (ಬಾಂಗ್ಲಾದೇಶ), (ಎಪಿ): ತೌಹಿದ್ ಹೃದಯ್ (57, 38 ಎಸೆತ) ಅವರ ಚೊಚ್ಚಲ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ರನ್‌ಗಳಿಂದ ಸೋಲಿಸಿತು.

ಈ ಗೆಲುವಿನ ಮೂಲಕ ಆತಿಥೇಯರು ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಪಡೆದರು. ಜಿಂಬಾಬ್ವೆ ಪರ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಫರಾಜ್ ಅಕ್ರಮ್ (ಔಟಾಗದೇ 34, 19ಎ) ಮತ್ತು ವೆಲಿಂಗ್ಟನ್ ಮಸಕದ್ಜಾ ಅವರು 9ನೇ ವಿಕೆಟ್‌ಗೆ 54 ರನ್ ಸೇರಿಸಿದ್ದು, ಆ ದೇಶದ ಪಾಲಿಗೆ ದಾಖಲೆ ಎನಿಸಿತು.

ಜಿಂಬಾಬ್ವೆ ವೇಗದ ಬೌಲರ್ ಬ್ಲೆಸಿಂಗ್ಸ್ ಮುಝರ್ಬಾನಿ 4 ಓವರುಗಳಲ್ಲಿ 14 ರನ್ನಿಗೆ 3 ವಿಕೆಟ್ ಪಡೆದಿದ್ದೂ ಕಡಿಮೆ ಸಾಧನೆಯಾಗಿರಲಿಲ್ಲ.

ನಾಲ್ಕನೇ ಟಿ20 ಪಂದ್ಯ ಶುಕ್ರವಾರ ಢಾಕಾದಲ್ಲಿ ನಡೆಯಲಿದೆ.

ಸ್ಕೋರುಗಳು: ಬಾಂಗ್ಲಾದೇಶ: 20 ಓವರುಗಳಲ್ಲಿ 5 ವಿಕೆಟ್‌ಗೆ 165 (ತೌಹಿದ್ ಹೃದಯ್ 57, ಜೇಕರ್ ಅಲಿ 44; ಬ್ಲೆಸಿಂಗ್ ಮುಝರಾನಿ 14ಕ್ಕೆ3); ಜಿಂಬಾಬ್ವೆ: 9 ವಿಕೆಟ್‌ಗೆ 156 (ತಡಿವಾನಶೆ ಮರುಮಣಿ 31, ಫರಾಜ್ ಅಕ್ರಮ್ ಔಟಾಗದೇ 34; ಮೊಹಮ್ಮದ್ ಸೈಫುದ್ದೀನ್ 42ಕ್ಕೆ3, ರಿಷದ್ ಹುಸೇನ್ 38ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.