ಹೈದರಾಬಾದ್: ಅರ್ಧಡಜನ್ ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯಿಸಿತು.

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ತಂಡವು 4 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಜಯಿಸಿತು. ಆರಂಭಿಕ ಬ್ಯಾಟರ್ ಅಭಿಷೇಕ್ (66; 28ಎ, 4X5, 6X6) ತಂಡದ ಗೆಲುವಿನ ರೂವಾರಿಯಾದರು.

ಇದರೊಂದಿಗೆ ಸನ್ರೈಸರ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಪಂಜಾಬ್ ತಂಡವು 9ನೇ ಸ್ಥಾನದಲ್ಲಿ ಉಳಿಯಿತು.

ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಥರ್ವ್ ತೈಡೆ (46; 27ಎ, 4X5, 6X2) ಹಾಗೂ ಪ್ರಭಸಿಮ್ರನ್ ಸಿಂಗ್ (71; 45ಎ, 4X7, 6X4) ಮೊದಲ ವಿಕೆಟ್ ಜೊತೆಯಾಟದಲ್ಲಿ 97 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 214 ರನ್ ಗಳಿಸಿತು.

ಒಂದು ರನ್ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡ ರಿಲಿ ರೂಸೊ (49; 24ಎ, 4X3, 6X4) ಕೂಡ ಮಹತ್ವದ ಕಾಣಿಕೆ ನೀಡಿದರು. ಹಂಗಾಮಿ ನಾಯಕ ಜಿತೇಶ್ ಶರ್ಮಾ (ಅಜೇಯ 32; 15ಎ, 4X2, 6X2) ಕೊನೆಯ ಹಂತದ ಓವರ್ಗಳಲ್ಲಿ ಮಿಂಚಿದರು.

ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಮೊದಲ ಎಸೆತದಲ್ಲಿಯೇ ಆರ್ಷದೀಪ್ ಸಿಂಗ್ ಕ್ಲೀನ್ಬೌಲ್ಡ್ ಮಾಡಿದರು.

ಅಭಿಷೇಕ್ ಜೊತೆಗೂಡಿದ ರಾಹುಲ್ ತ್ರಿಪಾಠಿ (33; 18ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. ನಂತರ ಬಂದ ನಿತೀಶ್ ರೆಡ್ಡಿ (37 ; 25ಎ, 4X1, 6X3) ಹಾಗೂ ಕ್ಲಾಸೆನ್ (42; 26ಎ, 4X3, 6X2) ಕೂಡ ತಂಡವನ್ನು ಜಯದತ್ತ ಮುನ್ನಡೆಸಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 214 (ಅಥರ್ವ್ ತೈಡೆ 46, ಪ್ರಭಸಿಮ್ರನ್ ಸಿಂಗ್ 71, ರೀಲಿ ರೊಸೊ 49, ಜಿತೇಶ್ ಶರ್ಮಾ ಔಟಾಗದೆ 32, ಟಿ ನಟರಾಜನ್ 33ಕ್ಕೆ2) ಸನ್ರೈಸರ್ಸ್ ಹೈದರಾಬಾದ್: 19.1 ಓವರ್ಗಳಲ್ಲಿ 6 ವಿಕೆಟ್ಗಳಿಗೆ 215 (ಅಭಿಷೇಕ್ ಶರ್ಮಾ 66, ರಾಹುಲ್ ತ್ರಿಪಾಠಿ 33, ನಿತೀಶ್ ರೆಡ್ಡಿ 37, ಹೆನ್ರಿಚ್ ಕ್ಲಾಸೆನ್ 42, ಅರ್ಷದೀಪ್ ಸಿಂಗ್ 37ಕ್ಕೆ2, ಹರ್ಷಲ್ ಪಟೇಲ್ 49ಕ್ಕೆ2) ಫಲಿತಾಂಶ: ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 4 ವಿಕೆಟ್ಗಳ ಜಯ. ಪಂದ್ಯಶ್ರೇಷ್ಠ : ಅಭಿಷೇಕ್ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.