ಧರ್ಮಶಾಲಾ: ಇಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು, ವಿರಾಟ್ ಕೊಹ್ಲಿಯವರ ಅರ್ಧಶತಕದ ( 95 ರನ್, 104 ಎಸೆತ ) ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿತು.

ಆ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಈ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೆ ಇದು ಮೊದಲ ಸೋಲು.

274 ರನ್‌ಗಳ ಗುರಿ ಪಡೆದ ಭಾರತಕ್ಕೆ ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ 71 ರನ್ ಕಲೆ ಹಾಕುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು.
.PHOTOS | IND vs AUS: ಏಕದಿನದಲ್ಲಿ ಮೊಹಮ್ಮದ್ ಶಮಿ 2ನೇ ಸಲ 5 ವಿಕೆಟ್ ಸಾಧನೆ.
ರೋಹಿತ್ ಶರ್ಮಾ 46 (40), ಶುಭಮನ್ ಗಿಲ್ 26 (31) ರನ್‌ಗಳಿಸಿದರು. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಕ್ರಮವಾಗಿ 33 ಹಾಗೂ 27 ರನ್ ಗಳಿಸಿದರು. ವಿಶ್ವಕಪ್‌ನಲ್ಲಿ ಮೊದಲ ಅವಕಾಶ ಪಡೆದ ಸೂರ್ಯಕುಮಾರ್ ಯಾದವ್ 2 ರನ್‌ಗೆ ರನೌಟ್ ಆಗಿ ನಿರ್ಗಮಿಸಿದರು.

ಗೆಲುವಿಗೆ ವಿರಾಟ್ ಕೊಹ್ಲಿ ಜತೆ ಕೈಜೋಡಿಸಿದ ರವೀಂದ್ರ ಜಡೆದ 43 ಎಸೆತಗಳಲ್ಲಿ 35 ರನ್ ಗಳಿಸಿದರು.

ನ್ಯೂಜಿಲೆಂಡ್ ಪರ ಲೂಕಿ ಫರ್ಗೂಸನ್ 2, ಟ್ರೆಂಟ್ ಬೋಲ್ಟ್, ಮ್ಯಾಟ್ ಹೆನ್ರಿ ಹಾಗೂ ಮಿಚೆಲ್ ಸ್ಟಾಂಟನರ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್, ಡ್ಯಾರಿಯಲ್ ಮಿಚೆಲ್ ಅವರ ಶತಕದ (130 ರನ್) ನೆರವಿನಿಂದ, 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 273 ರನ್‌ಗಳಿಸಿತು. ರಚಿನ್ ರವೀಂದ್ರ 75 ರನ್ ಗಳಿಸಿ ಗಮನ ಸೆಳೆದರು.

ಭಾರತದ ಪರ ಮೊಹಮ್ಮದ್ ಶಮಿ 5, ಕುಲದೀಪ್ ಯಾದವ್ 2, ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.