ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ತವರಿನಲ್ಲಿ ನಡೆಯುವ ಹಣಾಹಣಿಯಲ್ಲಿ ಜಯದ ಹಳಿಗೆ ಮರಳುವ ಪ್ರಯತ್ನದಲ್ಲಿದೆ. ಆ ಆವೃತ್ತಿಯಲ್ಲಿ ರನ್‌ಗಳ ಹೊಳೆ ಹರಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮತ್ತೊಂದು ಗೆಲುವಿನ ತುಡಿತದಲ್ಲಿದೆ.

ಹೊಸ ನಾಯಕ ಋತುರಾಜ್ ಗಾಯಕವಾಡ್ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ತಂಡವು ಈ ಋತುವಿನಲ್ಲಿ ಉತ್ತಮ ಆರಂಭವನ್ನು ಪಡೆದಿತ್ತು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋತಿತ್ತು.

ತವರಿನಲ್ಲೇ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ತಂಡವು ಋತುರಾಜ್ ಅವರ ಶತಕದ ಬಲದಿಂದ 210 ರನ್‌ಗಳ ಕಠಿಣ ಗುರಿಯನ್ನು ಲಖನೌ ತಂಡಕ್ಕೆ ನೀಡಿತ್ತು. ಆದರೆ, ಮಾರ್ಕಸ್ ಸ್ಟೊಯಿನಿಸ್ ಅವರ ಮಿಂಚಿನ ಶತಕ ಚೆನ್ನೈನ ಜಯದ ಕನಸಿಗೆ ತಣ್ಣೀರೆರಚಿತ್ತು.

ಎಂಟು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಋತುರಾಜ್ ಬಳಗವು 8 ಅಂಕಗಳನ್ನು ಕಲೆಹಾಕಿದೆ. ಪ್ಲೇ ಆಫ್ ಹಾದಿಯತ್ತ ಸಾಗಲು ತಂಡವು ಗೆಲುವಿನ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಅಲ್ಲದೆ, ಇದೇ ಏ.5ರಂದು ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ತಂಡದ ಮುಂದಿದೆ.

ಐಪಿಎಲ್‌ನ ಗರಿಷ್ಠ ರನ್ ದಾಖಲೆಯನ್ನು ಈ ಆವೃತ್ತಿಯಲ್ಲೇ ಎರಡು ಬಾರಿ ಮುರಿದ ಸನ್‌ರೈಸರ್ಸ್ ತಂಡವು ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಗ್ಗರಿಸಿತ್ತು. ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಪ್ಯಾಟ್ ಕಮಿನ್ಸ್ ಬಳಗವು ಚೆನ್ನೈ ವಿರುದ್ಧ ಮತ್ತೊಂದು ಗೆಲುವಿನ ಲೆಕ್ಕಾಚಾರದಲ್ಲಿದೆ.

ಚೆನ್ನೈ ಪರ ಋತುರಾಜ್, ಶಿವಂ ದುಬೆ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಿದ್ದಾರೆ. ಆದರೆ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್ ಸತತ ವಿಫಲರಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಮತ್ತೊಂದೆಡೆ ಬೌಲಿಂಗ್‌ನಲ್ಲಿ ಮಥಿಷ್ ತೀಕ್ಷಣ ಹೊರತುಪಡಿಸಿ ಉಳಿದವರು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.

ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡನ್ ಮರ್ಕರಂ ತಂಡಕ್ಕೆ ಆರಂಭದಲ್ಲೇ ರನ್ ಪ್ರವಾಹವನ್ನು ಹರಿಸಬಲ್ಲ ಬ್ಯಾಟರ್‌ಗಳು. ತಂಡಕ್ಕೆ ಬೌಲಿಂಗ್ ವಿಭಾಗದ್ದೆ ಚಿಂತೆಯಾಗಿದೆ. ಅನುಭವಿ ಭುವನೇಶ್ವರ ಕುಮಾರ್ ಕೊನೆಯ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾಗಿದ್ದಾರೆ. ಉಮ್ರಾನ್ ಮಲಿಕ್, ಫಜಲ್ಹಕ್ ಫಾರೂಕಿ ಮತ್ತು ಆಕಾಶ್ ಸಿಂಗ್ ಅವರಲ್ಲಿ ಯಾರಿಗಾದರೂ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಪಂದ್ಯ ಆರಂಭ: ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.