ರಾಂಚಿ: ದಿಗ್ಗಜ ಆಟಗಾರ ಎಂ.ಎಸ್.ಧೋನಿ ಅವರ ತವರಿನಲ್ಲಿ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ.

ಕಾರ್ಯಭಾರ ತಗ್ಗಿಸುವ ಭಾಗವಾಗಿ ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದು ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್ ತಂಡದಲ್ಲಿ ಮಾರ್ಕ್ ವುಡ್ ಬದಲಿಗೆ 30 ವರ್ಷದ ವೇಗದ ಬೌಲರ್ ಓಲಿ ರಾಬಿನ್ಸನ್ ತಂಡವನ್ನು ಸೇರಿಕೊಂಡಿದ್ದಾರೆ. ರೆಹಾನ್ ಆಹ್ಮದ್ ಬದಲು ಆಫ್ ಸ್ಪಿನ್ನರ್, 20 ವರ್ಷದ ಶೋಯೆಬ್ ಬಷೀರ್ ಅವರಿಗೆ ಅವಕಾಶ ನೀಡಿದೆ.

ಮಾಮೂಲಿನಂತೆ ಈ ಪಿಚ್ ಸಹ ಸ್ಪಿನ್ನರ್ಗಳಿಗೆ (ಭಾರತದಲ್ಲಿ ಸಾಮಾನ್ಯ) ನೆರವಾಗುವ ನಿರೀಕ್ಷೆಯಿದೆ. ಆದರೆ ಎಷ್ಟನೇ ದಿನ ಮತ್ತು ಯಾವ ಮಟ್ಟದಲ್ಲಿ ಎಂಬುದು ಗೋಜಲಾಗಿದೆ. ವಿಕೆಟ್ನ ಎರಡೂ ಕಡೆ ಚೆಂಡು ತಿರುವು ಪಡೆಯಲು ಅನುಕೂಲವಾಗುವ ಮುನ್ಸೂಚನೆಗಳು ಕಾಣುತ್ತಿವೆ.

ಭಾರತ ಐದು ಟೆಸ್ಟ್ಗಳ ಸರಣಿಯಲ್ಲಿ ಈಗ 2–1 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಜಾನಿ ಬೇಸ್ಟೊ, ಶೋಯೆಬ್ ಬಷೀರ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಓಲಿ ಪೋಪ್, ಓಲಿ ರಾಬಿನ್ಸನ್, ಜೇಮ್ಸ್ ಆ್ಯಂಡರ್ಸನ್

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.