ರಾಜ್ಕೋಟ್: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದಾರೆ. ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲೂ ದ್ವಿಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೂರು ಪಂದ್ಯಗಳ ಆರೂ ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಜೈಸ್ವಾಲ್, 2 ದ್ವಿಶತಕ ಹಾಗೂ 1 ಅರ್ಧಶತಕ ಸಹಿತ 545 ರನ್ ಕಲೆಹಾಕಿದ್ದಾರೆ. ಉಳಿದ ಯಾವೊಬ್ಬ ಬ್ಯಾಟರ್ ಮುನ್ನೂರರ ಗಡಿಯನ್ನೂ ದಾಟಿಲ್ಲ ಎಂಬುದು ವಿಶೇಷ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆನ್ ಡಕೆಟ್ (288 ರನ್) ಅವರು ಜೈಸ್ವಾಲ್ಗಿಂತ 257 ರನ್ ಹಿಂದಿದ್ದಾರೆ.

ರಾಜ್ಕೋಟ್ನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ 22 ವರ್ಷದ ಜೈಸ್ವಾಲ್ ತೋರಿದ ಅತ್ಯುತ್ತಮ ಆಟದ ಬಲದಿಂದ ಭಾರತ ತಂಡ ಇಂಗ್ಲೆಂಡ್ ಗೆಲುವಿಗೆ 557 ರನ್ಗಳ ಸವಾಲಿನ ಗುರಿ ನೀಡಿದೆ.

ಮೊದಲ ಇನಿಂಗ್ಸ್ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜ (112 ರನ್) ಶತಕಗಳ ಬಲದಿಂದ 445 ರನ್ ಗಳಿಸಿದ್ದ ಟೀಂ ಇಂಡಿಯಾ, ಪ್ರವಾಸಿ ಪಡೆಯನ್ನು 319 ರನ್ಗಳಿಗೆ ಆಲೌಟ್ ಮಾಡಿತ್ತು. 126 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, ಜೈಸ್ವಾಲ್ ದ್ವಿಶತಕ (ಅಜೇಯ 214 ರನ್), ಶುಭಮನ್ ಗಿಲ್ (91 ರನ್) ಹಾಗೂ ಸರ್ಫರಾಜ್ ಖಾನ್ (ಅಜೇಯ 68 ರನ್) ಅರ್ಧಶತಗಳ ನೆರವಿನಿಂದ 4 ವಿಕೆಟ್ಗೆ 430 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಕಠಿಣ ಗುರಿ ಬೆನ್ನತ್ತಿರುವ ಆಂಗ್ಲರ ತಂಡ, 32 ಓವರ್ಗಳಲ್ಲಿ 75 ರನ್ ಗಳಿಸಿ ಪ್ರಮುಖ 7 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರ್.ಅಶ್ವಿನ್ ಅನುಪಸ್ಥಿತಿಯಲ್ಲಿ ಸ್ಪಿನ್ ದಾಳಿಯ ಹೊಣೆ ಹೊತ್ತಿರುವ ರವೀಂದ್ರ ಜಡೇಜ ಮತ್ತು ಕುಲದೀಪ್ ಜಾದವ್ ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್ ಪಡೆದಿದ್ದಾರೆ. ವೇಗಿ ಜಸ್ಪ್ರಿತ್ ಬೂಮ್ರಾ 1 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಭಾರತ ಸುಲಭ ಜಯದ ನಿರೀಕ್ಷೆಯಲ್ಲಿದೆ.

ಜೈಸ್ವಾಲ್ ಬರೆದ ದಾಖಲೆಗಳ ವಿವರ ಇಲ್ಲಿದೆ.

ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್
ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ಗಳೆದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಜೈಸ್ವಾಲ್, ಒಟ್ಟು 12 ಸಿಕ್ಸರ್ ಸಿಡಿಸಿದರು. ಆ ಮೂಲಕ ಅವರು ಪಾಕಿಸ್ತಾನದ ವಾಸಿಂ ಅಕ್ರಂ ಅವರ ಹೆಸರಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಅಕ್ರಂ ಜಿಂಬಾಬ್ವೆ ವಿರುದ್ಧ 1996ರಲ್ಲಿ ನಡೆದ ಪಂದ್ಯದಲ್ಲಿ ಇಷ್ಟೇ ಸಿಕ್ಸ್ ಬಾರಿಸಿದ್ದರು.

ದ್ವಿಪಕ್ಷೀಯ ಸರಣಿಯಲ್ಲಿ ಹೆಚ್ಚು ಸಿಕ್ಸ್
ಈ ಪಂದ್ಯದಲ್ಲಿ ಬಾರಿಸಿದ 12 ಸಿಕ್ಸ್ ಸೇರಿದಂತೆ, ಟೂರ್ನಿಯಲ್ಲಿ ಒಟ್ಟು 22 ಸಿಕ್ಸರ್ಗಳು ಜೈಸ್ವಾಲ್ ಬ್ಯಾಟ್ನಿಂದ ಸಿಡಿದಿವೆ. ರೋಹಿತ್ ಶರ್ಮಾ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 19 ಸಿಕ್ಸ್ ಸಿಡಿಸಿದ್ದು ಈವರೆಗೆ ದಾಖಲೆಯಾಗಿತ್ತು.

ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಗರಿಷ್ಠ ರನ್
ಸದ್ಯ ನಡೆಯುತ್ತಿರುವ 2023–25ರ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಶ್ರೇಯವೂ ಯಶಸ್ವಿಯದ್ದಾಗಿದೆ. ಅವರು ಆಡಿರುವ 13 ಇನಿಂಗ್ಸ್ಗಳಲ್ಲಿ 71.75ರ ಸರಾಸರಿಯಲ್ಲಿ 861 ರನ್ ಗಳಿಸಿದ್ದಾರೆ. 20 ಇನಿಂಗ್ಸ್ಗಳಲ್ಲಿ 855 ರನ್ ಗಳಿಸಿರುವ ಆಸ್ಟ್ರೇಲಿಯಾ ಬ್ಯಾಟರ್ ಉಸ್ಮಾನ್ ಖ್ವಾಜಾ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತ ಪರ ಸತತ ಎರಡನೇ ದ್ವಿಶತಕ
ಮೂರನೇ ದಿನದಾಟದ ವೇಳೆ ಶತಕ (104 ರನ್) ಗಳಿಸಿದ್ದ ಜೈಸ್ವಾಲ್, ಗಾಯಗೊಂಡು ನಿವೃತ್ತಿ ಪಡೆದಿದ್ದರು. ಮರುದಿನ ಭಾರತದ ಮೂರನೇ ವಿಕೆಟ್ ಬಿದ್ದ ಬಳಿಕ ಕ್ರೀಸ್ಗೆ ಮರಳಿದ ಅವರು 231ನೇ ಎಸೆತದಲ್ಲಿ ದ್ವಿಶತಕದ ಮೈಲುಗಲ್ಲು ತಲುಪಿದರು.

ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ ಮೊದಲ ಮೂರು ಶತಕಗಳಲ್ಲೂ 150ರ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡ ಜೈಸ್ವಾಲ್, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟಾರೆ ಹಾಗೂ ಸತತ ಎರಡನೇ ದ್ವಿಶತಕ ಸಿಡಿಸಿದ ಸಂಭ್ರಮ ಆಚರಿಸಿದರು. ಅವರು ಎರಡನೇ ಟೆಸ್ಟ್ನಲ್ಲೂ ಇನ್ನೂರರ ಗಡಿ ದಾಟಿದ್ದರು. ಈ ಹಿಂದೆ ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದರು.

ಕಾಂಬ್ಳಿ ಅವರು 1992–93ರಲ್ಲಿ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಮತ್ತು ಕೊಹ್ಲಿ 2017ರಲ್ಲಿ ಶ್ರೀಲಂಕಾ ವಿರುದ್ಧ ಸತತ ದ್ವಿಶತಕ ಸಿಡಿಸಿದ್ದರು.

ಒಂದೇ ಸರಣಿಯಲ್ಲಿ ಎರಡು ದ್ವಿಶತಕ
ಎರಡನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 209 ರನ್ ಗಳಿಸಿದ್ದ ಜೈಸ್ವಾಲ್, ಮೂರನೇ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಅಜೇಯ 214 ರನ್ ಗಳಿಸಿದರು. ಇದರೊಂದಿಗೆ ಅವರು ಒಂದೇ ಟೂರ್ನಿಯಲ್ಲಿ ಎರಡು ದ್ವಿಶತಕ ಸಿಡಿದ ಭಾರತದ ಮೂರನೇ ಬ್ಯಾಟರ್ ಎನಿಸಿದರು. ವಿನೂ ಮಂಕಡ್ ಅವರು 1955ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ವಿರಾಟ್ ಕೊಹ್ಲಿ 2017–18ರಲ್ಲಿ ಶ್ರೀಲಂಕಾ ವಿರುದ್ಧ ಒಂದೇ ಟೂರ್ನಿಯಲ್ಲಿ ಎರಡು ಸಲ ದ್ವಿಶತಕ ಬಾರಿಸಿದ್ದರು.

ಹೆಚ್ಚು ರನ್ ಗಳಿಸಿದ ಎಡಗೈ ಬ್ಯಾಟರ್
ಟೂರ್ನಿಯಲ್ಲಿ ಸದ್ಯ 545 ರನ್ ಗಳಿಸಿರುವ ಜೈಸ್ವಾಲ್, ಭಾರತ ಪರ ಟೆಸ್ಟ್ ಸರಣಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ಎಡಗೈ ಬ್ಯಾಟರ್ ಎನಿಸಿಕೊಂಡರು. ಮಾಜಿ ನಾಯಕ ಸೌರವ್ ಗಂಗೂಲಿ 2007ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 534 ರನ್ ಗಳಿಸಿದ್ದದ್ದು, ಈವರೆಗೆ ದಾಖಲೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.