ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್ 99 ರನ್ ಗಳಿಸಿ ಔಟ್ ಆಗಿದ್ದಾರೆ.

ಆ ಮೂಲಕ ಬೆಂಗಳೂರಿನ ನೆಲದಲ್ಲಿ ಸ್ಮರಣೀಯ ಶತಕ ಮಿಸ್ ಮಾಡಿಕೊಂಡಿದ್ದಾರೆ.

ನಾಲ್ಕನೇ ದಿನದಾಟದಲ್ಲಿ ಸರ್ಫರಾಜ್ ರಾಜ್ ಅವರೊಂದಿಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದ ಪಂತ್, ಅಮೋಘ ಆಟದ ಮೂಲಕ ಗಮನ ಸೆಳೆದರು.

ಕಾಲು ನೋವನ್ನು ಲೆಕ್ಕಿಸದೇ ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದ ಪಂತ್, 105 ಎಸೆತಗಳಲ್ಲಿ 99 ರನ್ ಗಳಿಸಿ ಔಟ್ ಆದರು. ಅವರ ಇನಿಂಗ್ಸ್ನಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ಗಳು ಸೇರಿದ್ದವು. ನ್ಯೂಜಿಲೆಂಡ್ ವೇಗಿ ವಿಲಿಯ್ ಓರೂರ್ಕಿ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿಕ ರಿಷಭ್ ಪಂತ್, ಟೆಸ್ಟ್ ಕ್ರಿಕೆಟ್ನಲ್ಲಿ 99 ರನ್ನಿಗೆ ಔಟ್ ಆದ ಭಾರತದ ಎರಡನೇ ವಿಕೆಟ್ ಕೀಪರ್ ಎನಿಸಿದ್ದಾರೆ.

ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಏಳನೇ ಸಲ 90ರ ಗಡಿ ತಲುಪಿದ ಬಳಿಕ ಔಟ್ ಆಗಿದ್ದಾರೆ.

ಮೊದಲ ಇನಿಂಗ್ಸ್ನಲ್ಲಿ 20 ರನ್ ಗಳಿಸಿದ್ದ ಪಂತ್ ಟೀಮ್ ಇಂಡಿಯಾದ ಗರಿಷ್ಠ ಸ್ಕೋರರ್ ಎನಿಸಿದ್ದರು. ಭಾರತ ಕೇವಲ 46 ರನ್ನಿಗೆ ಆಲೌಟ್ ಆಗಿತ್ತು.

36 ಪಂದ್ಯಗಳ ಟೆಸ್ಟ್ ವೃತ್ತಿ ಜೀವನದಲ್ಲಿ ಪಂತ್ ಈವರೆಗೆ ಆರು ಶತಕಗಳನ್ನು ಗಳಿಸಿದ್ದಾರೆ.
.PHOTOS | ಬೆಂಗಳೂರಿನಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಸರ್ಫರಾಜ್ ಖಾನ್.IND vs NZ: ಭಾರತ 462ಕ್ಕೆ ಆಲೌಟ್; ನ್ಯೂಜಿಲೆಂಡ್ಗೆ 107 ರನ್ ಗೆಲುವಿನ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.