ಮುಂಬೈ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್ವಾಷ್ ಮುಖಭಂಗ ಅನುಭವಿಸಿದ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಟೀಂ ಇಂಡಿಯಾ ಮೂರೂ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್) ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತು ಎಂದು ಒಪ್ಪಿಕೊಂಡಿದ್ದಾರೆ.

'ನಾವು ಚೆನ್ನಾಗಿ ಆಡಲಿಲ್ಲ ಎಂಬುದನ್ನು ಖಂಡಿತಾ ಒಪ್ಪಿಕೊಳ್ಳುತ್ತೇವೆ. ನಮ್ಮ ತಂಡವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ನಾನಿಲ್ಲಿ ಕುಳಿತಿಲ್ಲ. ನಾವು ಮೂರೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದೆವು. ಅವರು (ನ್ಯೂಜಿಲೆಂಡ್) ನಮಗಿಂತ ಹೆಚ್ಚು ವೃತ್ತಿಪರರಾಗಿ ಆಡಿದರು. ನಾವು ಅದನ್ನು ಒಪ್ಪುತ್ತೇವೆ. ಟೀಕೆಗಳನ್ನು ಸ್ವೀಕರಿಸುತ್ತಾ ಮುನ್ನಡೆಯುತ್ತೇವೆ. ಪ್ರತಿದಿನ ಸುಧಾರಣೆಗೊಳ್ಳುವತ್ತ ಸಾಗುತ್ತೇವೆ' ಎಂದಿದ್ದಾರೆ.

'ನಾಯಕ ರೋಹಿತ್ ಶರ್ಮಾ ಜೊತೆಗಿನ ನನ್ನ ಸಂಬಂಧ ಉತ್ತಮವಾಗಿದೆ. ಈ ಮೂರು ಪಂದ್ಯಗಳಿಗೂ ಮುನ್ನ ನಾವು ಕಾನ್ಪುರದಲ್ಲಿ (ಬಾಂಗ್ಲಾದೇಶ ವಿರುದ್ಧ) ಅದ್ಭುತವಾಗಿ ಆಡಿದ್ದೆವು. ನ್ಯೂಜಿಲೆಂಡ್ ಎದುರು ಸಾಮರ್ಥ್ಯಕ್ಕೆ ತಕ್ಕಂತೆ ನಾವು ಆಡಿಲ್ಲ ಎಂಬುದು ಗೊತ್ತಿದೆ. ಆದರೆ, ಅದು ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
.ಕಿವೀಸ್ ಎದುರು ವೈಟ್ವಾಷ್: ಆಸಿಸ್ ಸರಣಿ ಬಳಿಕ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧಾರ.IND vs NZ | ಮುಂಬೈ ಟೆಸ್ಟ್ನಲ್ಲೂ ಮುಖಭಂಗ: ಕ್ಲೀನ್ ಸ್ವೀಪ್ ಮಾಡಿದ ಕಿವೀಸ್.
ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿ ಕುರಿತು, 'ಆಸ್ಟ್ರೇಲಿಯಾ ನಮ್ಮ ಹೊಸ ಎದುರಾಳಿ ಮತ್ತು ಅದು ಹೊಸ ಸರಣಿ. ಖಂಡಿತವಾಗಿಯೂ ನಾವು ಜಯ ಸಾಧಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ತೆರಳುತ್ತಿದ್ದೇವೆ' ಎಂದು ಹೇಳಿದ್ದಾರೆ.

ಟೀಕೆಗಳಿಂದ ಎದೆಗುಂದುವುದಿಲ್ಲ. ಭಾರತ ತಂಡದ ಕೋಚ್ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.

ಪರ್ತ್ ಟೆಸ್ಟ್ಗೆ ಬೂಮ್ರಾ ನಾಯಕ
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯು ಇದೇ 26ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಪರ್ತ್ನಲ್ಲಿ ನಡೆಯಲಿದೆ. ಒಂದು ವೇಳೆ ಆ ಪಂದ್ಯಕ್ಕೆ ರೋಹಿತ್ ಲಭ್ಯವಾಗದಿದ್ದರೆ, ವೇಗಿ–ಉಪನಾಯಕ ಜಸ್ಪ್ರೀತ್ ಬೂಮ್ರಾ ತಂಡ ಮುನ್ನಡೆಸಲಿದ್ದಾರೆ ಎಂದು ಗಂಭೀರ್ ಖಚಿತಪಡಿಸಿದ್ದಾರೆ.
.ಗೌತಮ್ ಗಂಭೀರ್ಗೆ ನಡವಳಿಕೆ, ಪದಗಳ ಕೊರತೆ: ಮಾಧ್ಯಮಗಳಿಂದ ದೂರವಿಡಿ ಎಂದ ಮಂಜ್ರೇಕರ್.IND vs NZ: ತವರಿನಲ್ಲಿ ಸೋತಿದ್ದನ್ನು ಅರಗಿಸಿಕೊಳ್ಳಲಾಗದು: ರೋಹಿತ್ ಶರ್ಮಾ ಬೇಸರ.ಮೊದಲ ಪಂದ್ಯ ರೋಹಿತ್ ಆಡದಿದ್ದರೆ ಸಂಪೂರ್ಣ ಸರಣಿಗೆ ಬೂಮ್ರಾ ನಾಯಕರಾಗಲಿ: ಗವಾಸ್ಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.