ನವದೆಹಲಿ: ದಕ್ಷಿಣ ಆಫ್ರಿಕಾದ ರಸಿ ವ್ಯಾನ್ ಡರ್ ಡಸೆ ಮತ್ತು ಡೇವಿಡ್ ಮಿಲ್ಲರ್ ಅವರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ಗೆ ಆತಿಥೇಯ ಭಾರತ ತಂಡದ ಬೌಲರ್ಗಳು ಬೆಚ್ಚಿಬೆರಗಾದರು.

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿಗಾಗಿ 212 ರನ್ಗಳನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. 7 ವಿಕೆಟ್ಗಳಿಂದ ಗೆದ್ದಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ರಸಿ (ಅಜೇಯ 75; 46ಎ, 4X7, 6X5) ಮತ್ತು ಮಿಲ್ಲರ್ (ಅಜೇಯ 64; 31ಎ, 4X4, 6X5) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 131 ರನ್ ಗಳಿಸಿದರು.ತಂಡವು 8.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 81 ರನ್ ಕಳೆದುಕೊಂಡಿತ್ತು. 68 ಎಸೆತಗಳಲ್ಲಿ 130 ರನ್ ಗಳಿಸುವ ಒತ್ತಡ ಇತ್ತು. ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ ಮತ್ತು ಡ್ವೇನ್ ಪ್ರಿಟೊರಿಯಸ್ ಔಟಾಗಿದ್ದರು.

ಈ ಹಂತದಲ್ಲಿ ರಸಿ ಮತ್ತು ಮಿಲ್ಲರ್ ತಮ್ಮ ಮೇಲಿನ ಭರವಸೆ ಉಳಿಸಿಕೊಂಡರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಹೊಡೆದ ಮಿಲ್ಲರ್ ಸಂಭ್ರಮಿಸಿದರು. 16ನೇ ಓವರ್ನಲ್ಲಿ ವ್ಯಾನ್ ಕ್ಯಾಚ್ ಕೈಬಿಟ್ಟ ಫೀಲ್ಡರ್ ಶ್ರೇಯಸ್ ಅಯ್ಯರ್ ಜೀವದಾನ ನೀಡಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ವ್ಯಾನ್ ಮತ್ತು ಮಿಲ್ಲರ್ ಜೋಡಿಯು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.ಹಾರ್ದಿಕ್ ಪಾಂಡ್ಯ ಕೇವಲ ಒಂದು ಓವರ್ ಹಾಕಿ 18 ರನ್ ಬಿಟ್ಟುಕೊಟ್ಟರು. ಆವೇಶ್ ಖಾನ್ ನಾಲ್ಕು ಓವರ್ಗಳಲ್ಲಿ 35 ರನ್ ಕೊಟ್ಟರು. ಉಳಿದ ಬೌಲರ್ಗಳೆಲ್ಲರೂ ಆವೇಶ್ಗಿಂತಲೂ ಹೆಚ್ಚು ತುಟ್ಟಿಯಾದರು.

ಇಶಾನ್ ಅರ್ಧಶತಕ:ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಶಾನ್ ಕಿಶನ್ (76; 48ಎ) ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 211 ರನ್ ಗಳಿಸಿತು.

ಆರಂಭಿಕ ಜೋಡಿ ಇಶಾನ್ ಕಿಶನ್ (76; 48ಎ, 4X11, 6X3) ಮತ್ತು ಋತುರಾಜ್ ಗಾಯಕವಾಡ್ (23; 15ಎ, 6X3) ಮೊದಲ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿ ಅಮೋಘ ಅರಂಭ ನೀಡಿದರು.

ಇಶಾನ್ ಜೊತೆಗೂಡಿದ ಶ್ರೇಯಸ್ ಅಯ್ಯರ್ ಕೂಡ ಬೀಸಾಟವಾಡಿದರು. ಮೂರು ಸಿಕ್ಸರ್ಗಳನ್ನೂ ಸಿಡಿಸಿದರು. ಕೇವಲ 27 ಎಸೆತಗಳಲ್ಲಿ 36 ರನ್ಗಳನ್ನು ಗಳಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್ಗಳನ್ನು ಸೇರಿಸಿದರು. ಶತಕದತ್ತ ಹೆಜ್ಜೆಟ್ಟಿದ್ದ ಇಶಾನ್ 13ನೇ ಓವರ್ನಲ್ಲಿ ಕೇಶವ್ ಮಹಾರಾಜ್ ಎಸೆತವನ್ನು ಸಿಕ್ಸರ್ಗೆತ್ತುವ ಭರದಲ್ಲಿ ಟ್ರಿಸ್ಟಾನ್ ಸ್ಟಬ್ಸ್ಗೆ ಸುಲಭದ ಕ್ಯಾಚಿತ್ತರು. ಮೂರು ಓವರ್ಗಳ ನಂತರ ಶ್ರೇಯಸ್ ಕೂಡ ಔಟಾದರು.

ಸ್ಕೋರ್ ಕಾರ್ಡ್

ಭಾರತ 4ಕ್ಕೆ 211 (20 ಓವರ್)

ಇಶಾನ್ ಸಿ ಸ್ಟಬ್ಸ್ ಬಿ ಮಹಾರಾಜ್ 76 (48ಎ, 4X11, 6X3), ಋತುರಾಜ್ ಸಿ ಬವುಮಾ ಬಿ ಪಾರ್ನೆಲ್ 23 (15ಎ, 6X3), ಶ್ರೇಯಸ್ ಬಿ ಪ್ರಿಟೋರಿಯಸ್ 36 (27ಎ, 4X1, 6X3), ರಿಷಭ್ ಸಿ ವ್ಯಾನ್ ಡರ್ ಡಸೆ ಬಿ ನಾರ್ಕಿಯಾ 29 (16ಎ, 4X2, 6X2), ಹಾರ್ದಿಕ್ ಔಟಾಗದೆ 31 (12ಎ, 4X2, 6X3), ಕಾರ್ತಿಕ್ ಔಟಾಗದೆ 1 (2ಎ)

ಇತರೆ (ಬೈ 1, ಲೆಗ್ಬೈ 2, ವೈಡ್ 12) 15

ವಿಕೆಟ್ ಪತನ: 1–57 (ಋತುರಾಜ್ ಗಾಯಕವಾಡ್, 6.2), 2–137 (ಇಶಾನ್ ಕಿಶನ್, 12.6), 3–156 (ಶ್ರೇಯಸ್ ಅಯ್ಯರ್, 16.1), 4–202 (ರಿಷಭ್ ಪಂತ್, 19.1)

ಬೌಲಿಂಗ್: ಕೇಶವ್ ಮಹಾರಾಜ್ 3–0–43–1, ಕಗಿಸೊ ರಬಾಡ 4–0–35–0, ಆ್ಯನ್ರಿಚ್ ನಾರ್ಕಿಯಾ 4–0–36–1, ವೇಯ್ನ್ ಪಾರ್ನೆಲ್ 4–0–32–1, ತಬ್ರೇಜ್ ಶಂಸಿ 2–0–27–0, ಡ್ವೇನ್ ಪ್ರಿಟೋರಿಯಸ್ 3–0–35–1

ದಕ್ಷಿಣ ಆಫ್ರಿಕಾ 3ಕ್ಕೆ 212 (19.1 ಓವರ್)

ಕ್ವಿಂಟನ್ ಡಿಕಾಕ್ ಸಿ ಇಶಾನ್ ಬಿ ಅಕ್ಷರ್ ಪಟೇಲ್ 22 (18 ಎ, 4X3), ತೆಂಬಾ ಬವುಮಾ ಸಿ ಪಂತ್ ಬಿ ಭುವನೇಶ್ವರ್ ಕುಮಾರ್ 10 (8 ಎ, 4X2), ಡ್ವೇನ್ ಪ್ರಿಟೋರಿಯಸ್ ಬಿ ಹರ್ಷಲ್ ಪಟೇಲ್ 29 (13 ಎ, 4X1, 6X4), ರಸಿ ವ್ಯಾನ್ ಡರ್ ಡಸೆ ಔಟಾಗದೆ 75 (46 ಎ, 4X7, 6X5), ಡೇವಿಡ್ ಮಿಲ್ಲರ್ ಔಟಾಗದೆ 64 (31 ಎ, 4X4, 6X5)

ಇತರೆ (ಲೆಗ್ ಬೈ 7, ನೋಬಾಲ್ 1, ವೈಡ್ 4) 12

ವಿಕೆಟ್ ಪತನ: 1-22 (ತೆಂಬ ಬವುಮಾ, 2.2), 2-61 (ಪ್ರಿಟೋರಿಯಸ್, 5.2), 3-81 (ಡಿಕಾಕ್, 8.4)

ಬೌಲಿಂಗ್: ಭುವನೇಶ್ವರ್ ಕುಮಾರ್ 4–0–43–1, ಆವೇಶ್ ಖಾನ್ 4–0–45–0, ಯಜುವೇಂದ್ರ ಚಾಹಲ್ 2.1–0–26–0, ಹಾರ್ದಿಕ್ ಪಾಂಡ್ಯ 1–0–18–0, ಹರ್ಷಲ್ ಪಟೇಲ್ 4–0–43–1, ಅಕ್ಷರ್ ಪಟೇಲ್ 4–0–40–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.