ದುಬೈ: ಭಾರತ ಕ್ರಿಕೆಟ್ ತಂಡವು ಶುಕ್ರವಾರ ಸ್ಕಾಟ್ಲೆಂಡ್ ತಂಡದ ಎದುರು ಕಣಕ್ಕಿಳಿಯಲಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.

ಅಫ್ಗಾನಿಸ್ತಾನದ ವಿರುದ್ಧ ಜಯ ಸಾಧಿಸಿದ ರೀತಿಯಲ್ಲೇ ಸ್ಕಾಟ್ಲೆಂಡ್ ವಿರುದ್ಧವೂ ಗೆಲುವು ಸಾಧಿಸುವುದು ಟೀಮ್ ಇಂಡಿಯಾಗೆ ಅನಿವಾರ್ಯವಾಗಿದೆ. ಜತೆಗೆ ನೆಟ್ ರನ್‌ರೇಟ್‌ನಲ್ಲಿಯೂ ದೊಡ್ಡ ಅಂತರ ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ.

ಸೂಪರ್ 12 ಹಂತದ ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿರುವ ಭಾರತ ತಂಡ ಅಫ್ಗಾನಿಸ್ತಾನ ವಿರುದ್ಧ ಗೆದ್ದಿದೆ.

ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಎರಡನೇ ತಂಡವಾಗಿ ಪ್ರವೇಶಿಸಲು ಕಿವೀಸ್‌ಗೆ ಭಾರತಕ್ಕಿಂತ ಹೆಚ್ಚು ಸರಳ ಅವಕಾಶಗಳಿವೆ. ಆದರೂ ತನ್ನ ಪಾಲಿನಲ್ಲಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದ ಜಯ ಗಳಿಸುವುದು ಕೂಡ ತಂಡಕ್ಕೆ ಮಹತ್ವದ್ದು.

ಅಫ್ಗನ್ ವಿರುದ್ಧದ ಜಯದಿಂದ ತುಸು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ತಂಡವು ಹೆಚ್ಚು ಬದಲಾವಣೆಗಳನ್ನು ಮಾಡದೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ರೋಹಿತ್, ಕೆ.ಎಲ್. ರಾಹುಲ್ ಜೋಡಿಯು ಶತಕದ ಜೊತೆಯಾಟವಾಡಿತ್ತು. ರಿಷಭ್ ಮತ್ತು ಹಾರ್ದಿಕ್ ತಮ್ಮ ಲಯ ಕಂಡುಕೊಂಡಿದ್ದರು. ಸ್ಪಿನ್ನರ್ ಆರ್.ಅಶ್ವಿನ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಉತ್ತಮ ಬೌಲಿಂಗ್‌ನೊಂದಿಗೆ ಗಮನ ಸೆಳೆದಿದ್ದರು.

ಇದನ್ನೂ ಓದಿ... ಭಾರತ–ಸ್ಕಾಟ್ಲೆಂಡ್ ಹಣಾಹಣಿ ಇಂದು: ಸುಲಭ ಜಯದ ಮೇಲೆ ವಿರಾಟ್ ಪಡೆ ಕಣ್ಣು

ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ \ ಭುವನೇಶ್ವರ್ ಕುಮಾರ್

ಸ್ಕಾಟ್ಲೆಂಡ್: ಕೈಲ್ ಕೊಯ್ಜೆರ್ (ನಾಯಕ), ಜಾರ್ಜ್ ಮನ್ಸಿ ರಿಚಿ ಬ್ಯಾರಿಂಗ್ಟನ್, ಕೆಲಮ್ ಮೆಕ್‌ಲಾಯ್ಡ್, ಮಿಚೆಲ್ ಲೀಸ್ಕ್, ಮ್ಯಾಥ್ಯೂ ಕ್ರಾಸ್, ಕ್ರಿಸ್ ಗ್ರೀವ್ಸ್, ಮಾರ್ಕ್ ವಾಟ್, ಸಫಿಯಾನ್ ಶರೀಫ್, ಬ್ರೆಡ್ಲಿ ವೀಲ್, ಕ್ರೇಗ್ ವಾಲೆಸ್, ಅಲ್ಸ್‌ಡೇರ್ ಇವಾನ್ಸ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.