ಹರಾರೆ: ಕ್ರಿಕೆಟ್ ಲೋಕದಲ್ಲಿ 'ಮಂಕಡಿಂಗ್' ಮಗದೊಮ್ಮೆ ಚರ್ಚೆಯ ವಿಷಯವಾಗಿದೆ. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪಕ್ ಚಾಹರ್, ಮಂಕಡಿಂಗ್ ಮಾಡಿದರೂ ಎದುರಾಳಿ ತಂಡದ ಬ್ಯಾಟರ್ಗೆ ಮಗದೊಂದು ಅವಕಾಶ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಚೊಚ್ಚಲ ಶತಕದ (130) ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು.

ಇದನ್ನೂ ಓದಿ: ಏನಿದು 'ಮಂಕಡಿಂಗ್' ರನೌಟ್ ?

ಬಳಿಕ ಸವಾಲಿನ ಮೊತ್ತ ಬೆನ್ನಟ್ಟಲು ಜಿಂಬಾಬ್ವೆ ಆರಂಭಿಕ ಜೋಡಿ ತಕುಡಾವಾಂಶೆ ಕೈಟಾನೊ ಹಾಗೂ ಇನೊಸೆಂಟ್ ಕೈಯಾ ಕ್ರೀಸಿಗಿಳಿದಿದ್ದರು.

ದೀಪಕ್ ಚಾಹರ್ ಬೌಲಿಂಗ್ ಮಾಡಲು ಓಡೋಡಿ ಬಂದರು. ಆದರೆ ಎಸೆತ ಹಾಕುವ ಮುನ್ನವೇ ನಾನ್ ಸ್ಟೈಕರ್ ಕ್ರೀಸ್ ಬಿಟ್ಟಿದ್ದನ್ನು ಗಮನಿಸಿದ ಚಾಹರ್ ಬೇಲ್ಸ್ ಹಾರಿಸಿದರು. ಆದರೆ ಔಟ್ಗಾಗಿ ಅಪೀಲ್ ಮಾಡಲಿಲ್ಲ.

ಅಲ್ಲದೆ ಬೌಲಿಂಗ್ ರನ್ಅಪ್ಗೆ ಹಿಂತಿರುಗಿದರು. ಪರಿಣಾಮ ಅಂಪೈರ್ 'ಡೆಡ್ ಬಾಲ್' ಎಂದು ಘೋಷಿಸಿದರು. ಇದರ ಲಾಭ ಪಡೆದ ಕೈಯಾ ಅವರಿಗೆ ಜೀವದಾನ ದೊರೆಯಿತು.

ಇದನ್ನೂ ಓದಿ:IND vs ZIM: ಶುಭಮನ್ ಗಿಲ್ ಚೊಚ್ಚಲ ಶತಕ; ಜಿಂಬಾಬ್ವೆ ಗೆಲುವಿಗೆ 290 ರನ್ ಗುರಿ

ಒಂದು ವೇಳೆ ಚಾಹರ್ ಅಪೀಲ್ ಮಾಡುತ್ತಿದ್ದರೆ ಅಂಪೈರ್ ಔಟ್ ನೀಡುತ್ತಿದ್ದರು. ಏಕೆಂದರೆ ಐಸಿಸಿ ನಿಯಮದಂತೆ ಮಂಕಡಿಂಗ್ ಅನ್ನು ರನೌಟ್ ಎಂದು ಪರಿಗಣಿಸಲಾಗುತ್ತದೆ.

ಕ್ರಿಕೆಟ್ ವಲಯದಲ್ಲಿ ಮಂಕಡಿಂಗ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. 2019ರ ಐಪಿಎಲ್ನಲ್ಲಿ ಆರ್. ಅಶ್ವಿನ್ ಅವರು ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.