ಮ್ಯಾಂಚೆಸ್ಟರ್: ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕೋವಿಡ್ ಆತಂಕದಿಂದಾಗಿ ಟೀಮ್ ಇಂಡಿಯಾ ಆಟಗಾರರು ಆಡಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಪಂದ್ಯ ಆರಂಭಗೊಳ್ಳಲು ಎರಡು ತಾಸು ಮಾತ್ರ ಬಾಕಿಯಿದ್ದಾಗ ಪಂದ್ಯ ರದ್ದುಗೊಳಿಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿ:ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ

'ಕೋವಿಡ್ ಆತಂಕದಲ್ಲಿ ಪಂದ್ಯವನ್ನು ಆಡಲು ಆಟಗಾರರು ನಿರಾಕರಿಸಿದರು. ಅದಕ್ಕಾಗಿ ನೀವು ಆಟಗಾರರನ್ನು ದೂಷಿಸುವಂತಿಲ್ಲ' ಎಂದು ದಿ ಟೆಲಿಗ್ರಾಫ್ ಪತ್ರಿಕೆಗೆ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

'ಸಹಾಯಕ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೆಪಂದ್ಯ ಆರಂಭಕ್ಕೂ ಹಿಂದಿನ ದಿನ ಕೋವಿಡ್ ಸೋಂಕು ದೃಢಪಟ್ಟಿತ್ತು. ಅವರು ಬಹುತೇಕ ಎಲ್ಲ ಆಟಗಾರರ ಸಂಪರ್ಕದಲ್ಲಿದ್ದರು' ಎಂದು ಗಂಗೂಲಿ ವಿವರಿಸಿದರು.

'ಸಹಾಯಕ ಫಿಸಿಯೊಗೆ ಸೋಂಕು ತಗುಲಿದೆ ಎಂಬುದನ್ನು ಅರಿತುಕೊಂಡ ಆಟಗಾರರು ವಿಚಲಿತಗೊಂಡರು. ತಮಗೂ ಸೋಂಕು ತಗುಲಿರಬಹುದೇ ಎಂದು ಭೀತಿಗೊಳಗಾದರು' ಎಂದು ದಾದಾ ನುಡಿದರು.

ಐಪಿಎಲ್ಗಾಗಿ ಭಾರತವು ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ದಾದಾ, 'ಬಿಸಿಸಿಐ ಬೇಜವಾಬ್ದಾರಿಯುತ ಮಂಡಳಿಯಲ್ಲ. ನಾವು ಇತರ ಮಂಡಳಿಗಳಿಗೂ ಗೌರವ ಕೊಡುತ್ತೇವೆ. ಉಳಿದಿರುವ ಒಂದು ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಆಯೋಜಿಸಲು ಯೋಜನೆ ಇರಿಸಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.