ನವದೆಹಲಿ: ಶನಿವಾರ ಭಾರತ ಮತ್ತು ಅಫ್ಗಾನಿಸ್ತಾನ ನಡುವೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೇದಾರ್ ಜಾದವ್ ಅವರು ಪ್ರದರ್ಶಿಸಿದ ನಿಧಾನಗತಿಯ ಬ್ಯಾಟಿಂಗ್ ಸಾಮಾಜಿ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದೆ.

ಸಮಯಕ್ಕೆ ತಕ್ಕಂತೆ ಆಕ್ರಮಣಕಾರಿಯಾಗಿ ಆಡಬೇಕಿದ್ದ ಧೋನಿ ಅವರು 52 ಬಾಲ್‌ಗಳಿಂದ ಕೇವಲ 28ರನ್ ಗಳಿಸಿ ಔಟಾದರು. ಇವರ ಜತೆಗೆ ಬ್ಯಾಟ್ ಬೀಸುತ್ತಿದ್ದ ಕೇದಾರ್ ಜಾದವ್ ಅವರೂ ನಿಧಾನಗತಿಯಲ್ಲೇ ಆಡುತ್ತಿದ್ದರು. ಅಂತಿಮವಾಗಿ ಇಬ್ಬರ ಜತೆಯಾಟದಲ್ಲಿ 84 ಬಾಲ್‌ಗಳಿಂದ ತಂಡಕ್ಕೆ ದಕ್ಕಿದ್ದು 57ರನ್‌ಗಳು ಮಾತ್ರ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನ ತರಿಸಿದೆ.

ತಂಡಕ್ಕೆ ರನ್‌ಗಳ ಅಗತ್ಯವಿರುವಾಗ ಬಾಲ್‌ಗಳನ್ನು ನಷ್ಟ ಮಾಡುತ್ತಾ, ನಿಧಾನಗತಿಯಲ್ಲಿ ಆಡುವುದು ಸರಿಯಲ್ಲ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮೇಮ್‌ಗಳನ್ನು ತಯಾರಿಸಿ ಟ್ರೋಲ್ ಮಾಡಿದ್ದಾರೆ.

ಕ್ರಿಕೆಟ್ ಜಗತ್ತಿಗೆ ಈಗಷ್ಟೇ ತೆರದುಕೊಳ್ಳುತ್ತಿರುವ ಅಫ್ಗಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಲೇ ತಂಡ ಉತ್ತಮ ಮೊತ್ತ ಕಲೆ ಹಾಕುವ ನಿರೀಕ್ಷೆ ಸಹಜವಾಗಿಯೇ ಕ್ರೀಡಾ ಪ್ರೇಮಿಗಳಲ್ಲಿ ಮೂಡಿತ್ತು. ಆದರೆ, ಅದು ಹಾಗೆ ಆಗಲೇ ಇಲ್ಲ. ರನ್ ಗಳಿಸಲು ಪ್ರತಿಯೊಬ್ಬರೂ ಪರದಾಡಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕಟ್‌ಗಳನ್ನು ಕಳೆದುಕೊಂಡು 224ರನ್‌ಗಳನ್ನಷ್ಟೇ ಗಳಿಸಿತ್ತು.

ಧೋನಿ–ಜಾದವ್ ಆಟಕ್ಕೆ ಸಾಮಾಜಿಕ ತಾಣದಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳು ಇಲ್ಲಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.