ಹೈದರಾಬಾದ್: ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಶತಕ ಹಾಗೂ ಅನುಭವಿ ಬ್ಯಾಟರ್ಗಳ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ 133 ರನ್ಗಳಿಂದ ಸುಲಭವಾಗಿ ಗೆದ್ದುಕೊಂಡಿತು.

ಭಾರತ 20 ಓವರುಗಳಲ್ಲಿ 6 ವಿಕೆಟ್ಗೆ 297 ರನ್ಗಳ ಭಾರಿ ಮೊತ್ತ ಗಳಿಸಿತು. ಇಷ್ಟು ದೊಡ್ಡ ಮೊತ್ತ ಗಳಿಸಿದ ನಂತರ, ಭಾರತದ ಗೆಲುವಿನ ಅಂತರದ ಬಗ್ಗೆಯಷ್ಟೇ ಆಸಕ್ತಿ ಉಳಿದಿತ್ತು.

ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ. ನೇಪಾಳ, ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 3 ವಿಕೆಟ್ಗೆ 314 ರನ್ ಗಳಿಸಿದ್ದು ದಾಖಲೆಯಾಗಿದೆ. ಆದರೆ ಟೆಸ್ಟ್ ಆಡುವ ತಂಡಗಳ ಪೈಕಿ ಇದು ದಾಖಲೆಯ ಮೊತ್ತ. 2019ರಲ್ಲಿ ಡೆಹ್ರಾಡೂನ್ ನಲ್ಲಿ ಅಫ್ಗಾನಿಸ್ತಾನ, ಐರ್ಲೆಂಡ್ ವಿರುದ್ಧ 3 ವಿಕೆಟ್ಗೆ 278 ರನ್ ಗಳಿಸಿದ್ದು, ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.

ಭಾರತದ ಈ ಹಿಂದಿನ ಗರಿಷ್ಠ ಮೊತ್ತ 5 ವಿಕೆಟ್ಗೆ 260 ರನ್ಗಳಾಗಿತ್ತು. ಇದನ್ನು ಶ್ರೀಲಂಕಾ ವಿರುದ್ಧ 2017ರಲ್ಲಿ ಇಂದೋರ್ನಲ್ಲಿ ಗಳಿಸಿತ್ತು.

ಭಾರತದ ಆಕ್ರಮಣದ ಆಟದೆದುರು ಕಂಗಾಲಾದ ಬಾಂಗ್ಲಾದೇಶ 20 ಓವರುಗಳಲ್ಲಿ 7 ವಿಕೆಟ್ಗೆ 164 ರನ್ ಗಳಿಸಿ ಸವಾಲು ಮುಗಿಸಿತು. ವೇಗದ ನವತಾರೆ ಮಯಂಕ್ ಯಾದವ್ (32ಕ್ಕೆ2) ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (30ಕ್ಕೆ3) ಪರಿಣಾಮಕಾರಿ ಎನಿಸಿದರು. ಭಾರತ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತು.

ಬಾಂಗ್ಲಾದೇಶ ಮೊದಲ ಎಸೆತದಲ್ಲೇ ಪರ್ವೇಜ್ ಹುಸೇನ್ ಅವರನ್ನು ಕಳೆದುಕೊಂಡಿತು. ಮಯಂಕ್ ಈ ವಿಕೆಟ್ ಪಡೆದರು. ನಂತರ ಹೇಳಿಕೊಳ್ಳುವಂಥ ಹೋರಾಟ ಕಂಡುಬರಲಿಲ್ಲ. ತೌಹಿದ್ ಹೃದಯ್ (ಅಜೇಯ 63, 42ಎ, 4x5, 6x3) ಮತ್ತು ಲಿಟನ್ ದಾಸ್ (42, 25ಎ, 4x8) ಸ್ವಲ್ಪ ಪ್ರತಿರೋಧ ತೋರಿಸಿದರಷ್ಟೇ.

ಆರಂಭ ಆಟಗಾರನಾಗಿ ಸ್ಯಾಮ್ಸನ್ ಮೊದಲ ಎರಡು ಅವಕಾಶಗಳನ್ನು ಹೇಳಿಕೊಳ್ಳುವ ರೀತಿ ಸದುಪಯೋಗ ಪಡಿಸಿಕೊಂಡಿರಲಿಲ್ಲ. ಹೀಗಾಗಿ ಅವರ ಮೇಲೆ ಒತ್ತಡವಿತ್ತು. ಈ ಪಂದ್ಯದಲ್ಲಿ ಆ ಹಿನ್ನಡೆಗಳನ್ನು ಬಡ್ಡಿಸಮೇತ ತೀರಿಸುವಂತೆ ಕೇವಲ 47 ಎಸೆತಗಳಲ್ಲಿ 111 ರನ್ (4x11, 6x8) ಚಚ್ಚಿದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ. ವೇಗದ ಶತಕದ ದಾಖಲೆ ರೋಹಿತ್ ಶರ್ಮಾ (35 ಎಸೆತ) ಹೆಸರಿನಲ್ಲಿದೆ. ಸಂಜು ಅವರು ನಾಯಕ ಸೂರ್ಯಕುಮಾರ್ ಯಾದವ್ (75, 4x8, 6x5) ಜೊತೆ ಎರಡನೇ ವಿಕೆಟ್ಗೆ 173 ರನ್ ಸೇರಿಸಿ ತಂಡಕ್ಕೆ ‘ಕನಸಿನ ಆರಂಭ’ ಒದಗಿಸಿದರು.

ಅಭಿಷೇಕ್ ಶರ್ಮಾ ಎರಡನೇ ಓವರಿ ನಲ್ಲೇ ನಿರ್ಗಮಿಸಿದರು. ಆದರೆ ಬಾಂಗ್ಲಾ ದೇಶದ ಸಂಭ್ರಮ ಕ್ಷಣಾರ್ಧದಲ್ಲಿ ಕರಗಿ ಹೋಯಿತು. ನಂತರದ್ದೆಲ್ಲಾ ಬೌಂಡರಿ, ಸಿಕ್ಸರ್ಗಳ ಸುರಿಮಳೆಯದ್ದೇ ಆಟ.

ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ (ಇನಿಂಗ್ಸ್ನ ಎರಡನೇ ಓವರ್) ಅವರು ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿ ಆಕ್ರಮಣದಾಟಕ್ಕೆ ಚಾಲನೆ ನೀಡಿದರು. ಇದರಲ್ಲಿ ಎರಡು ಕವರ್ ಡ್ರೈವ್, ಎರಡು ಫ್ಲಿಕ್ ಸೇರಿದ್ದವು. ಪವರ್ ಪ್ಲೇ ಅವಧಿಯಲ್ಲೇ 86 ರನ್ಗಳು ಹರಿದುಬಂದವು. 10 ಓವರುಗಳ ನಂತರ ಮೊತ್ತ 1 ವಿಕೆಟ್ಗೆ 152.

ಬಾಂಗ್ಲಾದ ಯಾವುದೇ ಬೌಲರ್ ದಂಡನೆಯಿಂದ ಪಾರಾಗಲಿಲ್ಲ. ರಿಷದ್ ಹುಸೇನ್ ಮಾಡಿದ ಇನಿಂಗ್ಸ್ನ ಹತ್ತನೇ ಓವರಿನಲ್ಲಿ ಸಂಜು ಸತತ ಐದು ಸಿಕ್ಸರ್ ಗಳನ್ನು ಎತ್ತಿ ತೋಳ್ಬಲ ಮೆರೆದರು. ಮುಸ್ತಫಿಝುರ್ ಬೌಲಿಂಗ್ನಲ್ಲಿ ಬ್ಯಾಕ್ ಫುಟ್ನಲ್ಲಿ ಎಕ್ಸ್ಟ್ರಾ ಕವರ್ ಮೇಲೆ ಸಿಕ್ಸರ್ ಎತ್ತಿದ ಅವರು, ಆಫ್ ಸ್ಪಿನ್ನರ್ ಮೆಹೆದಿ ಹಸನ್ ಬೌಲಿಂಗ್ನಲ್ಲಿ ಬೌಂಡರಿ ಮೂಲಕ 40 ಎಸೆತಗಳಲ್ಲಿ ಶತಕ ಪೂರೈಸಿದರು. ಒಂದೆಡೆ ಸಂಜು ಆರ್ಭಟ ಮೇರೆಮೀರಿದರೆ, ಇನ್ನೊಂದೆಡೆ ಸೂರ್ಯಕುಮಾರ್ ತುಂಬಾ ಹಿಂದೆ ಬೀಳಲಿಲ್ಲ. ತಂಜಿಮ್ ಒಂದೇ ಓವರಿನಲ್ಲಿ ಮೂರು ಬೌಂಡರಿ, ಒಂದು ಸಿಕ್ಸರ್ ಎತ್ತಿದ ಅವರು ಕೇವಲ 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು.

ಇಬ್ಬರೂ ಅಲ್ಪ ಅಂತರದಲ್ಲಿ ಪೆವಿಲಿ ಯನ್ಗೆ ಮರಳಿದರೂ, ಅಷ್ಟರೊಳಗೆ ಬಾಂಗ್ಲಾ ತಂಡ ಅತೀವ ಒತ್ತಡಕ್ಕೆ ಒಳ ಗಾಗಿತ್ತು. ಆಗ ತಂಡದ ಮೊತ್ತ 15ನೇ ಓವರಿನಲ್ಲಿ 3 ವಿಕೆಟ್ಗೆ 206 ರನ್. ಆದರೆ ಆತಿಥೇಯರ ಬೀಸಾಟ ಎಗ್ಗಿಲ್ಲದೇ ಮುಂದುವರಿಯಿತು. ಹಾರ್ದಿಕ್ (47, 18ಎ, 4x4, 6x4) ಮತ್ತು ರಿಯಾನ್ ಪರಾಗ್ (34, 13ಎ, 4x1, 6x4) ಅವರು ತಂಡವನ್ನು 300ರ ಗಡಿಯ ಸಮೀಪ ತಲುಪಿಸಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.