ರಾಂಚಿ: ಅನುಭವಿಗಳ ಹೋರಾಟದೊಡನೆ ಆರಂಭವಾದ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನದ ಆಟ ಕೊನೆಯಲ್ಲಿ ಯುವ ಆಟಗಾರರ ನಡುವೆ ಪೈಪೋಟಿಯಲ್ಲಿ ಅಂತ್ಯಗೊಂಡಿತು. ಇಂಗ್ಲೆಂಡ್ ತಂಡ ದಿನದಾಟದಲ್ಲಿ ಆತಿಥೇಯ ತಂಡದ ವಿರುದ್ಧ ಹಿಡಿತ ಸಾಧಿಸಿತು.

7 ವಿಕೆಟ್‌ಗೆ 302 ರನ್‌ಗಳೊಡನೆ ಶನಿವಾರ ಆಟ ಮುಂದುವರಿಸಿದ ಇಂಗ್ಲೆಂಡ್ ತಂಡ 353 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇಂಥ ಪಿಚ್‌ನಲ್ಲಿ ಆತಿಥೇಯರಿಂದ ಪ್ರತಿಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ಭಾರತ ತಂಡ ಆಡಿದ ರೀತಿ ನೋಡಿದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಮಾಧಾನವನ್ನಂತೂ ಮೂಡಿಸಿರಲಿಕ್ಕಿಲ್ಲ. ಭಾರತ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 219 ರನ್ ಗಳಿಸಿದ್ದು, ಇಂಗ್ಲೆಂಡ್ ತಂಡಕ್ಕಿಂತ ಇನ್ನೂ 134 ರನ್ ಹಿಂದೆಯಿದೆ.

ಒಂದು ಹಂತದಲ್ಲಿ 177 ರನ್ನಿಗೆ 7 ವಿಕೆಟ್ ಬಿದ್ದಾಗ ಜೊತೆಗೂಡಿದ ಯುವ ಆಟಗಾರರಾದ ಕುಲದೀಪ್ ಯಾದವ್ (ಬ್ಯಾಟಿಂಗ್ 30) ಮತ್ತು ಧ್ರುವ್ ಜುರೇಲ್ (ಬ್ಯಾಟಿಂಗ್ 17) ಮುರಿಯದ ಎಂಟನೇ ವಿಕೆಟ್‌ಗೆ 42 ರನ್ ಸೇರಿದ ತಂಡದ ಕುಸಿತವನ್ನು ತಡೆಗಟ್ಟಿದರು. ಪ್ರವಾಸಿ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಷೀರ್ ಕೊನೆಯ ಎರಡು ಅವಧಿಗಳಲ್ಲಿ ಮಿಂಚಿದರು.

ಶುಕ್ರವಾರ 106 ರನ್ ಗಳಿಸಿದ್ದ ಜೋ ರೂಟ್ 122 ರನ್‌ಗಳೊಡನೆ ಅಜೇಯರಾಗುಳಿದರು. ಇಂಗ್ಲೆಂಡ್‌ನ ಕೊನೆಯ ಮೂರು ವಿಕೆಟ್‌ಗಳು ರವೀಂದ್ರ ಜಡೇಜಾ ಪಾಲಾದವು. ಅವರು 32.5 ಓವರುಗಳಲ್ಲಿ 67 ರನ್ನಿಗೆ 4 ವಿಕೆಟ್ ಪಡೆದರು. ಆದರೆ ಬೆಳಿಗ್ಗೆ ಪಡೆದ ಪುಟಿತ ಮತ್ತು ತಿರುವು, ಹಿಂದಿನ ದಿನ ಅವರ ಮತ್ತು ಅಶ್ವಿನ್ ಬೌಲಿಂಗ್‌ನಲ್ಲಿ ವಿರಳವಾಗಿತ್ತು.

ಜೇಮ್ಸ್ ಆ್ಯಂಡರ್ಸನ್ ಅವರು ನಾಯಕ ರೋಹಿತ್ ಶರ್ಮಾ ಅವರ ಮಹತ್ವದ ವಿಕೆಟ್ ಪಡೆದರು. ಆದರೆ ಒಳ್ಳೆಯ ಲಯದಲ್ಲಿರುವ ಯಶಸ್ವಿ ಜೈಸ್ವಾಲ್ (73) ಮತ್ತು ಶುಭಮನ್ ಗಿಲ್ (38) ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಸ್ಪಿನ್ನರ್‌ಗಳು ದಾಳಿಗಿಳಿಯುತ್ತಿದ್ದಂತೆ ಪರಿಸ್ಥಿತಿ ಬದಲಾಯಿತು. 22 ವರ್ಷದ ಜೈಸ್ವಾಲ್ ಆತ್ಮವಿಶ್ವಾಸದಿಂದ ಆಡಿ ಮತ್ತೊಂದು ಅರ್ಧ ಶತಕ ಗಳಿಸಿದ್ದರು. ಆದರೆ ಅವರು ಬಷಿರ್ ಬೌಲಿಂಗ್‌ನಲ್ಲಿ ಕೆಳಮಟ್ಟದಲ್ಲಿ ಬಂದ ಚೆಂಡಿಗೆ ಬೌಲ್ಡ್ ಆದರು (161ಕ್ಕೆ5). ಜೈಸ್ವಾಲ್ 103 ರನ್ ಸರಾಸರಿಯಲ್ಲಿ ಇದುವರೆಗೆ 618 ರನ್ ಕಲೆಹಾಕಿದಂತಾಗಿದೆ.

ಆಫ್ ಬ್ರೇಕ್ ಬೌಲರ್ ಶೋಯೆಬ್ ಬಷೀರ್ ಅವರು ಆತಿಥೇಯ ತಂಡಕ್ಕೆ ಕಡಿವಾಣ ತೊಡಿಸಿದರು. ಪಿಚ್‌ನಲ್ಲಿ ತಿರುವು ಮತ್ತು ಬೌನ್ಸ್ ಪಡೆಯುತ್ತಿದ್ದ ಎತ್ತರದ ಆಳು ಬಷೀರ್ ಚೆಂಡಿಗೆ ಸ್ವಲ್ಪ ವೇಗವನ್ನೂ ನೀಡಿ ಭಾರತದ ಆಟಗಾರರನ್ನು ಕಾಡಿ 83 ರನ್ನಿಗೆ 4 ವಿಕೆಟ್ ಪಡೆದರು. ಅನುಭವಿ ಅಶ್ವಿನ್ ಅವರಿಗೆ ಹೋಲಿಸಿದರೆ ಪಿಚ್‌ನ ಉಪಯೋಗವನ್ನು ಅವರೇ ಹೆಚ್ಚಾಗಿ ಪಡೆದಿದ್ದು. ಕೇವಲ ಏಳು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 20 ವರ್ಷದ ಬೌಲರ್, ಭಾರತದ ಆಟಗಾರರನ್ನು ಅವರದ್ದೇ ನೆಲದಲ್ಲಿ ಕಟ್ಟಿಹಾಕಿದ್ದು ಕುತೂಹಲಕ್ಕೆ ಎಡೆಮಾಡಿತು.

ಹೈದರಾಬಾದಿನಲ್ಲಿ ಆತಿಥೇಯ ತಂಡ ಎರಡನೇ ಟೆಸ್ಟ್ ಸೋತಾಗ ಟಾಮ್ ಹಾರ್ಟ್ಲಿ ಕಾಡಿದ್ದರು. ನಂತರದ ಎರಡು ಟೆಸ್ಟ್‌ಗಳಲ್ಲಿ ಭಾರತ ಸ್ಪಿನ್ನರ್‌ಗಳೆದುರು ಸುಧಾರಿತ ಪ್ರದರ್ಶನ ನೀಡಿತ್ತು. ಆದರೆ ಎರಡನೇ ದಿನ ಅಂಥ ಆಟ ಕಾಣಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.