ಧರ್ಮಶಾಲಾ: ಇಂಗ್ಲೆಂಡ್ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದರು.

ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನವಾದ ಶುಕ್ರವಾರ ಇಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು. ಊಟದ ವಿರಾಮದ ವೇಳೆಗೆ ರೋಹಿತ್ ಶರ್ಮಾ 102, ಗಿಲ್ 101 ರನ್‌ಗಳಿಸಿ ಆಡುತ್ತಿದ್ದರು.

ನಿನ್ನೆ ಭಾರತ 30 ಓವರುಗಳಲ್ಲಿ 1 ವಿಕೆಟ್‌ಗೆ 135 ರನ್ ಗಳಿಸಿ ದಿನದಾಟ ಮುಗಿಸಿತು. ಯಶಸ್ವಿ ಜೈಸ್ವಾಲ್ (57 ರನ್) ಔಟಾಗಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರದ್ದು 12ನೇ ಶತಕವಾದರೇ, ಗಿಲ್ ಅವರದ್ದು ನಾಲ್ಕನೇ ಶತಕವಾಗಿದೆ.

ಕುಲದೀಪ್ ಯಾದವ್ ನೇತೃತ್ವದಲ್ಲಿ ಸ್ಪಿನ್‌ತ್ರಯರು ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಮುದುರಿತು. ರವಿಚಂದ್ರನ್ ಅಶ್ವಿನ್ 4, ಕುಲದೀಪ್ ಯಾದವ್ 5 ಹಾಗೂ ಜಡೇಜ 1 ವಿಕೆಟ್ ಪಡೆದರು.

ಊಟದ ವಿರಾಮದ ವೇಳೆಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 264 ರನ್‌ಗಳಿಸಿದೆ. ಈ ಮೂಲಕ ಭಾರತ 46 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 218–10

ಭಾರತ ಮೊದಲ ಇನ್ನಿಂಗ್ಸ್: 264–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.