ಬರ್ಮಿಂಗ್‌ಹ್ಯಾಮ್: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗಮನ ಸೆಳೆದಿದ್ದಾರೆ.

ಭಾರತದ ಎದುರು ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿತ್ತು.

171 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್ ಆರಂಭಿಕ ಆಘಾತ ಎದುರಿಸಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಜೇಸನ್ ರಾಯ್ ವಿಕೆಟ್ ಗಳಿಸಿದ ಭುವಿ, ಮೂರನೇ ಓವರ್‌ನಲ್ಲಿ ಜೋಸ್ ಬಟ್ಲರ್‌ಗೂ ಡಗ್‌ಔಟ್ ಹಾದಿ ತೋರಿಸಿದರು.

ಇದರೊಂದಿಗೆ 17 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಗಲು ಭುವನೇಶ್ವರ್ ಕುಮಾರ್ (15ಕ್ಕೆ3) ಕಾರಣರಾದರು. 49 ರನ್‌ಗಳಿಂದ ಗೆದ್ದ, ರೋಹಿತ್ ಬಳಗವು ಮೂರು ಪಂದ್ಯಗಳ ಟಿ–20 ಸರಣಿಯಲ್ಲಿ 2–0 ಮುನ್ನಡೆ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.

ಓದಿ...ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜೋಸ್ ಬಟ್ಲರ್ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ ಭುವನೇಶ್ವರ್ ಕೈಚಳಕ ತೋರಿಸಿದ್ದಾರೆ.

ಈ ಪಂದ್ಯದಲ್ಲಿ ರಾಯ್ ಮತ್ತು ಬಟ್ಲರ್ ಹೊರತಾಗಿ ರಿಚರ್ಡ್ ಗ್ಲೀಸನ್ ಅವರನ್ನೂ ಭುವಿ ಔಟ್ ಮಾಡಿದ್ದಾರೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಮತ್ತು ಕೊನೆಯ ಟಿ–20 ಪಂದ್ಯ ಭಾನುವಾರ ನಡೆಯಲಿದೆ. ಭುವನೇಶ್ವರ್, ಸೌಥಾಂಪ್ಟನ್‌ನಲ್ಲಿ ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬಟ್ಲರ್‌ಗೆ ಡಗೌಟ್ ಹಾದಿ ತೋರಿಸಿದ್ದರು.

ಓದಿ...IND vs ENG: ಸತತ 19ನೇ ಗೆಲುವು; ದಾಖಲೆಯ ಹೊಸ್ತಿಲಲ್ಲಿ ಹಿಟ್ಮ್ಯಾನ್

ಓದಿ...

IND vs ENG 2nd T20I: ಇಂಗ್ಲೆಂಡ್ ವಿರುದ್ಧ ಸರಣಿ ಕೈವಶಪಡಿಸಿಕೊಂಡ ಟೀಮ್ ಇಂಡಿಯಾ

INDvsENG: ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ ಧೋನಿ, ಫೋಟೊಗಳು ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.