ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ – ಸೌರವ್ ಗಂಗೂಲಿ ನೇತೃತ್ವದ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಲು ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಜೋಡಿಗೆ ಬೇಕಿದೆ 94 ರನ್!

ಫೆ.6ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಜೋಡಿ ಕೇವಲ 81 ಇನ್ನಿಂಗ್ಸ್ಗಳಲ್ಲಿ 64.55 ಸರಾಸರಿಯಂತೆ 4,906 ರನ್ ಗಳಿಸಿದೆ. 5 ಸಾವಿರ ರನ್ ಗಳಿಸಲು 94 ರನ್ಗಳ ಅಗತ್ಯವಿದೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಲಿ ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.

ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರು 176 ಇನ್ನಿಂಗ್ಸ್ಗಳಲ್ಲಿ 47.55 ರನ್ ಸರಾಸರಿಯಲ್ಲಿ 8,227 ರನ್ ಕಲೆ ಹಾಕಿದ್ದಾರೆ.

ರೋಹಿತ್ ಮತ್ತು ಶಿಖರ್ ಧವನ್ ಜೋಡಿ ಅವರು 112 ಇನ್ನಿಂಗ್ಸ್ಗಳಲ್ಲಿ 45.25 ಸರಾಸರಿಯಲ್ಲಿ 5,023 ರನ್ ಗಳಿಸಿದ್ದಾರೆ. 5 ಸಾವಿರ ರನ್ ಗಳಿಸಿದ ಭಾರತೀಯ ಜೋಡಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಫೆ.6ರಿಂದ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಬಳಿಕ ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ಮೂರು ಪಂದ್ಯಗಳ ಟಿ–20 ಸರಣಿ ನಡೆಯಲಿದೆ.

ಓದಿ... ಯುವ ನಟಿಯೊಂದಿಗೆ ಮತ್ತೆ ಕಾಣಿಸಿಕೊಂಡ ಹೃತಿಕ್: ಅಭಿಮಾನಿಗಳಲ್ಲಿ ಹೆಚ್ಚಿತು ಕುತೂಹಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.