ಬೆಂಗಳೂರು: ಆರಂಭಿಕ ಜೋಡಿ ಪೀಟರ್ ಮಲಾನ್ ಮತ್ತು ಸರೆಲ್ ಎರ್ವಿ ಭಾರತದ ಯುವ ಬೌಲರ್ಗಳನ್ನು ದಂಡಿಸಿದರು. ಇದರ ಪರಿಣಾಮ ದಕ್ಷಿಣ ಆಫ್ರಿಕಾ ‘ಎ’ ತಂಡ ಬಿಸಿಸಿಐ ಅಧ್ಯಕ್ಷರ ಇಲೆವನ್ ತಂಡದ ಎದುರಿನ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಆರಂಭ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭೋಜನ ವಿರಾಮದ ವೇಳೆ ದಕ್ಷಿಣ ಆಫ್ರಿಕಾ ಯುವ ಬಳಗ 25 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 138 ರನ್ ಗಳಿಸಿದೆ.

ಟಾಸ್ ಗೆದ್ದ ಖಯಲಿಲೆ ಜೊಂಡೊ ನಾಯಕತ್ವದ ತಂಡ ಬ್ಯಾಟಿಂಗ್ ಆರಿಸಿಕೊಂಡಿತು. ಭಾರತ ‘ಎ’ ತಂಡದ ಆವೇಶ್ ಖಾನ್ ಮತ್ತು ಶಿವಂ ಮಾವಿ ನೇತೃತ್ವದ ವೇಗದ ಬೌಲರ್ಗಳನ್ನು ನಿರಾಯಾಸವಾಗಿ ಎದುರಿಸಿದ ಮಲಾನ್ ಮತ್ತು ಸರೆಲ್ ಆರಂಭದಲ್ಲೇ ಬೌಂಡರಿಗಳನ್ನು ಸಿಡಿಸಿದರು.

ನಂತರ ಆವೇಶ್ ಖಾನ್ ನಿಖರತೆಯನ್ನು ಕಂಡುಕೊಂಡರೂ ಶಿವಂ ಮಾವಿ ದುಬಾರಿಯಾಗಿಯೇ ಮುಂದುವರಿದರು.

ಬೌಲಿಂಗ್ನಲ್ಲಿ ಬದಲಾವಣೆ ಮಾಡಿ ಇಶಾನ್ ಪೊರೆಲ್ ಮತ್ತು ಅಭಿಷೇಕ್ ಸೇಟ್ ಅವರನ್ನು ದಾಳಿಗೆ ಇಳಿಸಿದರೂ ಎದುರಾಳಿ ಬ್ಯಾಟ್ಸ್ಮನ್ಗಳು ಜಗ್ಗಲಿಲ್ಲ. ಈ ಬಾರಿಯ ದೇಶಿ ಋತುವಿನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾದಲ್ಲಿ ಮನೆ ಮಾತಾಗಿರುವ ಸರೆಲ್ ಪಿಚ್ನಲ್ಲಿ ಹೊತ್ತು ಕಳೆದಂತೆ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದರು.

ಹೀಗಾಗಿ ಭೋಜನ ವಿರಾಮದ ವೇಳೆ 82 ರನ್ ಗಳಿಸಿ ಶತಕದತ್ತ ಹೆಜ್ಜೆ ಹಾಕಿದ್ದಾರೆ. 96 ಎಸೆತ ಎದುರಿಸಿದ್ದ ಅವರು 16 ಬೌಂಡರಿ ಸಿಡಿಸಿದ್ದರು. ಮಲಾನ್ 58 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಅವರ ಇನಿಂಗ್ಸ್ನಲ್ಲಿ ಏಳು ಬೌಂಡರಿಗಳು ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.