ಬ್ರಿಜ್ಟೌನ್: ಟಿ20 ವಿಶ್ವಕಪ್ ಸೂಪರ್ ಎಂಟರ ಹಂತಕ್ಕೇರಿರುವ ಭಾರತ ತಂಡವು ಕೆರಿಬಿಯನ್ ಲೆಗ್ನಲ್ಲಿ ಮೊದಲ ಸಲ ತಾಲೀಮು ಆರಂಭಿಸಿತು. ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಹೆಚ್ಚು ಹೊತ್ತು ಬೆವರು ಹರಿಸಿದರು.

ಕೊಹ್ಲಿ ಗುಂಪು ಹಂತದ ಪಂದ್ಯಗಳಲ್ಲಿ ವಿಫಲರಾಗಿದ್ದರು. ಅವರ ಸ್ಕೋರುಗಳು 1, 4 ಮತ್ತು 0. ಹೀಗಾಗಿ ಸೂಪರ್ ಎಂಟರ ಹಂತದ ಮತ್ತು ನಾಕೌಟ್ ಪಂದ್ಯಗಳಲ್ಲಿ ಅವರಿಗೆ ಲಯಕ್ಕೆ ಮರಳಬೇಕಾದ ಒತ್ತಡವಿದೆ.

ಭಾರತವು ಗುರುವಾರ ನಡೆಯುವ ಸೂಪರ್ ಎಂಟು ಹಂತದ ಮೊದಲ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು ಕೆನ್ಸಿಂಗ್ಟನ್ ಓವಲ್ನಲ್ಲಿ ಎದುರಿಸಲಿದೆ. ಇದುವರೆಗೆ ಬೌಲಿಂಗ್ ಅಥವಾ ಬ್ಯಾಟಿಂಗ್ನಲ್ಲಿ ಜಡೇಜ ಅವರ ಕೊಡುಗೆಯೂ ಹೇಳಿಕೊಳ್ಳುವ ರೀತಿಯಲ್ಲಿಲ್ಲ. ವೇಗಿಗಳ ಸ್ನೇಹಿಯಾಗಿದ್ದ ಪಿಚ್ ಬ್ಯಾಟರ್ಗಳ ಪಾಲಿಗೆ ತಲೆನೋವಾಗಿತ್ತು.

ಕುಲದೀಪ್ ಹಾಲಿ ವಿಶ್ವಕಪ್ನಲ್ಲಿ ಒಂದೂ ಪಂದ್ಯ ಆಡಿಲ್ಲ. ಆದರೆ ವೆಸ್ಟ್ ಇಂಡೀಸ್ನ ಪಿಚ್ಗಳಲ್ಲಿ ಅವರು ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಅವರನ್ನು ಮುಂದಿನ ಹಂತದಲ್ಲಿ ಆಡಿಸುವುದು ಖಚಿತವಾಗಿದೆ.

ಎಲ್ಲ ಆಟಗಾರರು ಅಭ್ಯಾಸಕ್ಕೆ ಹಾಜರಾದರು. ಪಿಚ್ ಹೇಗಿದೆ ಎಂದು ನಾಯಕ ರೋಹಿತ್, ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಕೇಳಿದರು. ಬೂಮ್ರಾ ಪ್ರಸನ್ನವದನರಾದಂತೆ ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.