ಭಾರತ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದಲ್ಲಿ ತಮ್ಮ ಅಮೋಘವಾದ ಬ್ಯಾಟಿಂಗ್ ಶೈಲಿಯ ಜೊತೆಜೊತೆಗೆ ಆಕ್ರಮಣಕಾರಿ ನಡೆಯಿಂದಲೂ ಗುರುತಿಸಿಕೊಳ್ಳುತ್ತಾರೆ. ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ವೇಳೆ ಕೊಹ್ಲಿ ತೋರಿದ ಅಂತಹದೊಂದು ವರ್ತನೆಯ ವಿರುದ್ಧ ನೆಟ್ಟಿಗರು ಟೀಕಾಪ್ರಹಾರ ಮಾಡಿದ್ದಾರೆ.

ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ಸಿಬಿ, ನಿಗದಿತ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ಗಳನ್ನು ಕಳೆದುಕೊಂಡು 164 ರನ್ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ಮುಂಬೈ ತಂಡ 5 ವಿಕೆಟ್ಗಳನ್ನು ಕಳೆದುಕೊಂಡು ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 166 ರನ್ ಗಳಿಸಿ ಜಯದ ನಗೆ ಬೀರಿತ್ತು.

ಕೆಣಕಲು ಹೋದ ವಿರಾಟ್!
ಪ್ಲೇ ಆಫ್ನತ್ತ ಸಾಗಲು ಮಹತ್ವವೆನಿಸಿದ್ದ ಈ ಪಂದ್ಯದಲ್ಲಿ 165 ರನ್ ಗುರಿ ಎದುರು ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ 13 ಓವರ್ಗಳಲ್ಲಿ 99 ರನ್ ಗಳಿಸಿತ್ತು. ಅದಾಗಲೇ ಪ್ರಮುಖ ಮೂರು ವಿಕೆಟ್ಗಳು ಉರುಳಿದ್ದವು. ಆದರೆ, ಕೇವಲ 25 ಎಸೆತಗಳನ್ನು ಎದುರಿಸಿ 40 ರನ್ ಗಳಿಸಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಆರ್ಸಿಬಿಗೆ ತಲೆನೋವಾಗಿದ್ದರು.

ಡೇಲ್ ಸ್ಟೇಯ್ನ್ ಎಸೆದ 13ನೇ ಓವರ್ನ ಎರಡು, ಮೂರು ಮತ್ತು ಐದನೇ ಎಸೆತವನ್ನು ಬೌಂಡರಿಗಟ್ಟಿದ್ದ ಯಾದವ್, ಕೊನೆಯ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ್ದರು. ಸಿಲ್ಲಿ ಮಿಡ್ಆಫ್ನಲ್ಲಿ ನಿಂತಿದ್ದ ಕೊಹ್ಲಿ ಚೆಂಡನ್ನು ಹಿಡಿದು,ಯಾದವ್ ಅವರನ್ನೇ ನೋಡುತ್ತಾ ಬಳಿಗೆ ಬಂದರು.ಯಾದವ್ ಕೂಡ ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತ ಇಂದಿಂಚೂ ಕದಲದೆ ನಿಂತರು. ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲವಾದರೂ, ಯಾದವ್ರನ್ನು ಕೆಣಕಲು ಕೊಹ್ಲಿ ಈ ರೀತಿ ಮಾಡಿದರು ಎಂಬ ಟೀಕೆಗಳು ವ್ಯಕ್ತವಾಗಿವೆ.

ಪಂದ್ಯದಲ್ಲಿ ಅಜೇಯ ಆಟವಾಡಿದ ಯಾದವ್ ಕೇವಲ 43 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿ ತಮ್ಮ ತಂಡಕ್ಕೆ ನಿರಾಯಾಸವಾಗಿ ಗೆಲುವು ತಂದುಕೊಟ್ಟರು.

ಯಾದವ್ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ
ಇದುವರೆಗೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳದ 30 ವರ್ಷದ ಯಾದವ್ ಅವರಿಗೆ ಈ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸೋಮವಾರವಷ್ಟೇ ಪ್ರಕಟವಾಗಿದ್ದ ತಂಡದಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು.

ಈ ಬಾರಿಯ ಐಪಿಎಲ್ನಲ್ಲಿ 12 ಪಂದ್ಯಗಳ 11 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಯಾದವ್, ಮೂರು ಅರ್ಧಶತಕ ಸಹಿತ 362 ರನ್ ಗಳಿಸಿದ್ದಾರೆ.

ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೂ ಅವರನ್ನು ಆಯ್ಕೆಗೆ ಪರಿಗಣಿಸದಿರುವುರು ಏಕೆ ಎಂದು ಕೆಲ ಹಿರಿಯ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದಾಗಲೇ ವಿರಾಟ್ ಈ ರೀತಿ ವರ್ತಿಸಿರುವುದು ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ನೆಟ್ಟಿಗರು ವಿರಾಟ್ ವರ್ತನೆಯನ್ನು ‘ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.

ನಿಕಿತಾ ಮಾಳವೀಯ ಎನ್ನುವವರು, ‘ವಿರಾಟ್ ಕೊಹ್ಲಿಯಿಂದ ನಾಚಿಕೆಗೇಡು ವರ್ತನೆ. ಕೊಹ್ಲಿಯನ್ನು ನಾನು ದ್ವೇಷಿಸಲು ಇದೊಂದು ದೊಡ್ಡ ಕಾರಣ. ಆತ ಐಪಿಎಲ್ನಲ್ಲಿ ಎಂದಿಗೂ ಕ್ರೀಡಾ ಸ್ಫೂರ್ತಿಯನ್ನು ಮೆರೆದಿಲ್ಲ. ಈ ಪಂದ್ಯದಲ್ಲಿ ಆತ ಸೋಲಿಗೆ ಅರ್ಹನಾಗಿದ್ದ. ಆತ ಸೋಲು ಅನುಭವಿಸಿದ್ದರಿಂದ ನಾನು ತುಂಬಾ ಸಂತಸಗೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

Shameful Act By #ViratKohli This Is The Biggest Reason Why I Hate @imVkohli He never shows a Sportsman's Spirit in the #IPL.#Kohli deserved to lose the match And I am very happy that he lost the match.#RCBvsMI#MI#IPL2020#Suryakumaryadhav#Dream11IPL pic.twitter.com/U0HKij0nFy
— Nikita Malviya🇮🇳 (@NkMalviya10) October 29, 2020

‘ಇದು ವಿರಾಟ್ ಕೊಹ್ಲಿಯ ನಾಚಿಕೆಗೇಡು ವರ್ತನೆ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸ್ಲೆಡ್ಜ್ ಮಾಡಲು ಅವರಿಗೆ ಯಾವುದೇ ಕಾರಣ ಇರಲಿಲ್ಲ’ ಎಂದು ಸ್ಯಾಮ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

Shameful act by virat kohli and no reason for sledge to Surya Kumar Yadav #SuryakumarYadav pic.twitter.com/y4mtnzq2j5
— Sam (@sameersheikh45) October 29, 2020

ಸೂರ್ಯಕುಮಾರ್ ಅವರತ್ತ ಈ ರೀತಿ ಆಕ್ರಮಣಕಾರಿ ನೋಟ ಬೀರುವ ಬದಲು, ಮುಂದಿನ ದಿನಗಳಲ್ಲಿ ತಂಡಕ್ಕೆ ಆಯ್ಕೆ ಮಾಡುವ ಭರವಸೆ ನೀಡಬಹುದಿತ್ತು. ಕಿಂಗ್ ಕೊಹ್ಲಿ ಆ ಅಂಶವನ್ನು ಮಿಸ್ ಮಾಡಿಕೊಂಡರು ಎಂದು ಮತ್ತೊಬ್ಬರು ಉಲ್ಲೇಖಿಸಿದ್ದಾರೆ.

Instead of an aggressive stare to SKY, Kohli would have given some type of assurance for the future team selection.
King Kohli missed that brownie points pic.twitter.com/kjFEeodhg5
— Godman Chikna (@Madan_Chikna) October 29, 2020

ಪ್ರಾಂಜಲ್ ಎನ್ನುವವರು, ‘ವಿರಾಟ್ ಕೊಹ್ಲಿ ಏನು ತಪ್ಪು ಮಾಡಿದರು ಎಂದು ನಾನು ಈಗಲೂ ಹುಡುಕುತ್ತಿದ್ದೇನೆ. ಸೂರ್ಯಕುಮಾರ್ಗೆ ಒಂದೇಒಂದು ಮಾತನ್ನೂ ಹೇಳಿಲ್ಲ. ಈ ವಿಡಿಯೊದಲ್ಲಿ ಕೊಹ್ಲಿ ತಪ್ಪು ಮಾಡಿರುವುದು ನಿಮಗೆ ಕಾಣುತ್ತಿದೆ ಎಂದರೆ, ನೀವು ಟಿವಿ ಧಾರವಾಹಿಗಳಿಗೆ ಸೀಮಿತರಾಗಿಬಿಡಿ. ಕ್ರೀಡೆ ಇರುವುದು ನಿಮಗಲ್ಲ’ ಎಂದು ವಿರಾಟ್ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

Still trying to find out what Kohli wrong in that..... Didn't even said a word to SuryaKumar
If you're finding Kohli wrong here from that video...... You should stick to watching Saas bahu tv Serials, Sports is not for you
— Pranjal (@Pranjal_one8) October 28, 2020

ಮತ್ತಷ್ಟು ಟ್ವೀಟ್ಗಳು ಇಲ್ಲಿವೆ.

A cheap way to deal. Absolutely zero class. 😐#Kohli pic.twitter.com/NlMTOTk1dE
— निश्चल शर्मा 🇮🇳 (@nischl_sharma) October 28, 2020

Stare between Suryakumar Yadav and Virat Kohli, Sky looking frustrated for not getting picked and it was visible in his expressions. pic.twitter.com/sZY3lMnlxx
— Mufaddal Vohra (@mufaddal_vohra) October 28, 2020

I am sorry Kohli has to stop these petty things. That's the difference between a great player and a great leader. He has achieved great things, so why be silly like Gambhir. Be like Sachin, Dhoni, Dravid. You are Indian team captain so there is going to be lot of criticism.
— வேணாம் (@sillymsdian7) October 28, 2020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.