ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್, ಇತ್ತೀಚೆಗೆ ವಿಧಿವಶರಾಗಿದ್ದ ಸಹೋದರಿಯನ್ನು ನೆನೆದು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಬರೆದಿದ್ದಾರೆ.

'ನನ್ನ ಜೀವನದ ಅತ್ಯಂತ ಕರುಣಾಮಯಿ ಹಾಗೂ ಸಂತೋಷದಾಯಕ ವ್ಯಕ್ತಿಗಳಲ್ಲಿ ನೀವು ಒಬ್ಬರು. ನಿಮ್ಮ ಕೊನೆಯ ಉಸಿರಿನವರೆಗೂ ನಗುಮುಖದೊಂದಿಗೆ ಜೀವನದ ಸಂಕಷ್ಟಗಳನ್ನು ಎದುರಿಸಿದ್ದೀರಿ' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಹುಲ್ ಜೊತೆಗಿನ ಚಿತ್ರ ಹಂಚಿದ ನಟಿ ಅಥಿಯಾ

'ನಾನು ಭಾರತಕ್ಕೆ ಹಿಂದಿರುಗುವ ಮೊದಲು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇದ್ದಾಗ, ನಿಮ್ಮ ಬಗ್ಗೆ ಚಿಂತಿಸಬಾರದು, ಆಟದ ಕಡೆ ಗಮನ ಕೊಡು ಎಂದು ಹೇಳಿದ್ದೀರಿ. ಕಳೆದ ರಾತ್ರಿ ಮೈದಾಕ್ಕಿಳಿಯಲು ಆ ಮಾತುಗಳೇ ಕಾರಣ' ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ 'ನೀವು ನನ್ನ ಬಗ್ಗೆ ಹೆಮ್ಮೆಪಡುವಂತಹ ಕೆಲಸವನ್ನು ಮಾಡುವುದನ್ನು ಮುಂದುವರಿಸುತ್ತೇನೆ' ಎಂದು ಹರ್ಷಲ್ ಮಾತು ಕೊಟ್ಟಿದ್ದಾರೆ.

'ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.