ಮುಂಬೈ: ವನಿಂದುಹಸರಂಗ(20ಕ್ಕೆ 4 ವಿಕೆಟ್) ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಂಘಿಕ ಬೌಲಿಂಗ್‌ಗೆ ತತ್ತರಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ129 ರನ್‌ಗಳ ಸುಲಭ ಗುರಿ ಪಡೆದಿದೆ.

ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತುಪಡಿಸಿದ ಆರ್‌ಸಿಬಿ ಬೌಲರ್‌ಗಳು ನಿಖರ ದಾಳಿ ನಡೆಸುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಆರ್‌ಸಿಬಿ ಹಿನ್ನಡೆ ಅನುಭವಿಸಿತ್ತು.

ವನಿಂದುಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್, ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದರು. ಪರಿಣಾಮ 87ಕ್ಕೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಜಿಂಕ್ಯ ರಹಾನೆ (9), ವೆಂಕಟೇಶ್ ಅಯ್ಯರ್ (10), ನಾಯಕ ಶ್ರೇಯಸ್ ಅಯ್ಯರ್ (13), ನಿತೀಶ್ ರಾಣಾ (10), ಸುನಿಲ್ ನಾರಾಯಣ್ (12), ಸ್ಯಾಮ್ ಬಿಲ್ಲಿಂಗ್ಸ್ (14) ಹಾಗೂ ವಿಕೆಟ್ ಕೀಪರ್ ಶೆಲ್ಡನ್ ಜ್ಯಾಕ್ಸನ್ (0) ನಿರಾಸೆ ಅನುಭವಿಸಿದರು.

ಈ ವೇಳೆ ಕೌಂಟರ್ ಅಟ್ಯಾಕ್ ಮಾಡಿದ ಆ್ಯಂಡ್ರೆ ರಸೆಲ್ ಅಲ್ಪ ಹೊತ್ತು ಆತಂಕ ಸೃಷ್ಟಿಸಿದರು. ಈ ಸಂದರ್ಭದಲ್ಲಿ ರಸೆಲ್ ವಿಕೆಟ್ ಪಡೆದ ಹರ್ಷಲ್ ಪಟೇಲ್ ಆರ್‌ಸಿಬಿ ಕ್ಯಾಂಪ್‌ನಲ್ಲಿ ಮಂದಹಾಸ ಬೀರಿದರು. 18 ಎಸೆತಗಳನ್ನು ಎದುರಿಸಿದ ರಸೆಲ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು.

ಆದರೆ ಕೊನೆಯ ವಿಕೆಟ್‌ಗೆ 27 ರನ್‌ಗಳ ಜೊತೆಯಾಟ ಕಟ್ಟಿದ ಉಮೇಶ್ ಯಾದವ್ (18) ಹಾಗೂ ವರುಣ್ ಚಕ್ರವರ್ತಿ (10*), ಕೆಕೆಆರ್ 128 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.ಆರ್‌ಸಿಬಿ ಪರ ಹಸರಂಗನಾಲ್ಕು, ಆಕಾಶ್ ಮೂರು, ಹರ್ಷಲ್ ಎರಡು ಹಾಗೂ ಸಿರಾಜ್ ಒಂದು ವಿಕೆಟ್ ಕಿತ್ತು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.