ಲಖನೌ: ಮಾರ್ಕಸ್ ಸ್ಟೋಯಿನಿಸ್ (89*) ಹಾಗೂ ನಾಯಕ ಕೃಣಾಲ್ ಪಾಂಡ್ಯ (49*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಇಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.

ಪ್ಲೇ-ಆಫ್ ಹಂತದತ್ತ ಕಣ್ಣಿಟ್ಟಿರುವ ಇತ್ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಖನೌ ಆರಂಭ ಉತ್ತಮ ಆಗಿರಲಿಲ್ಲ. ತಂಡವು 35 ರನ್ ಗಳಿಸುವಷ್ಟರಲ್ಲಿ ದೀಪಕ್ ಹೂಡಾ (5), ಕ್ವಿಂಟನ್ ಡಿ ಕಾಕ್ (16) ಹಾಗೂ ಪ್ರೇರಕ್ ಮಂಕಡ್ (0) ವಿಕೆಟ್ ನಷ್ಟವಾಯಿತು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೃಣಾಲ್ ಪಾಂಡ್ಯ ಹಾಗೂ ಮಾರ್ಕಸ್ ಸ್ಟೋಯಿನಿಸ್ ತಂಡವು ಗೌರವಾರ್ಹ ಮೊತ್ತ ಪೇರಿಸಲು ನೆರವಾದರು.

ಅಲ್ಲದೆ ನಾಲ್ಕನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 49 ರನ್ ಗಳಿಸಿದ ಕೃಣಾಲ್ ಪಾಂಡ್ಯ ಗಾಯದಿಂದಾಗಿ ನಿವೃತಿ ಹೊಂದಿದರು.

ಅತ್ತ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೋಯಿನಿಸ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಸ್ಟೋಯಿನಿಸ್ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ಔಟಾಗದೆ ಉಳಿದರು.

ಕೊನೆಗೆ ಮುರಿಯದ ಐದನೇ ವಿಕೆಟ್‌ಗೆ ನಿಕೋಲಸ್ ಪೂರನ್ (8*) ಜೊತೆ ಕೇವಲ 24 ಎಸೆತಗಳಲ್ಲಿ ಸ್ಟೋಯಿನಿಸ್ 60 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಮುಂಬೈ ಪರ ಜೇಸನ್ ಬೆಹ್ರೆನ್‌ಡಾರ್ಫ್ ಎರಡು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.