ಜೈಪುರ: ಐಪಿಎಲ್ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರಿಸಲಿದೆ.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ರಾಯಲ್ಸ್ ತಂಡವು ಮುಂಬೈ ತಂಡವನ್ನು ಅದರ ತವರಿನಲ್ಲಿಯೇ ಮಣಿಸಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಳಗಕ್ಕೆ ಈಗ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಇದೆ.

ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ತಂಡವು ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಉಳಿದದ್ದರಲ್ಲಿ ಜಯಭೇರಿ ಬಾರಿಸಿದೆ. ಆರನೇ ಸ್ಥಾನದಲ್ಲಿರುವ ಮುಂಬೈ ತಂಡವು ಮೂರರಲ್ಲಿ ಮಾತ್ರ ಗೆದ್ದು, ನಾಲ್ಕರಲ್ಲಿ ಸೋತಿದೆ.

ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಮುಂಬೈ ಜಯಿಸಿತ್ತು. ವೇಗಿ ಜಸ್ಪ್ರೀತ್ ಬೂಮ್ರಾ ಅವರ ಪರಿಣಾಮಕಾರಿ ದಾಳಿಯಿಂದಾಗಿ ಗೆಲುವು ಸಾಧ್ಯವಾಗಿತ್ತು. ಇದುವರೆಗೆ ಒಟ್ಟು 13 ವಿಕೆಟ್ ಗಳಿಸಿರುವ ಬೂಮ್ರಾ ಒಬ್ಬರೇ ಮುಂಬೈ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬೌಲರ್ ಆಗಿದ್ದಾರೆ. ಗೆರಾಲ್ಡ್ ಕೋಝಿ (12 ವಿಕೆಟ್) ಮತ್ತು ಆಕಾಶ್ ಮದ್ವಾಲ್ ಕೂಡ ಉತ್ತಮವಾಗಿದ್ದಾರೆ. ಆದರೆ ನಾಯಕ ಹಾರ್ದಿಕ್ ಬೌಲಿಂಗ್ ಪರಿಣಾಮಕಾರಿಯಾಗಿಲ್ಲ.

ಸ್ಪಿನ್ನರ್ ಶ್ರೇಯಸ್ ಗೋಪಾಲ್ ಆಡಿರುವ ಮೂರು ಪಂದ್ಯಗಳಲ್ಲಿ ತಲಾ ಒಂದು ವಿಕೆಟ್ ಗಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ ಈಗಾಗಲೇ ಒಂದು ಶತಕ ದಾಖಲಿಸಿದ್ದಾರೆ. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಅವರ ಅಸ್ಥಿರತೆ ಮುಂದುವರಿದಿದೆ. ತಿಲಕ್ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಆಟವಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿರುವುದು ಮುಂಬೈ ತಂಡಕ್ಕೆ ಸಮಾಧಾನದ ವಿಷಯ. ಆದರೆ, ರಾಜಸ್ಥಾನ ತಂಡದ ಬೌಲಿಂಗ್ ಪಡೆಯನ್ನು ಎದುರಿಸುವುದು ಸುಲಭವಲ್ಲ. ಟ್ರೆಂಟ್ ಬೌಲ್ಡ್, ಡೆತ್ ಓವರ್ ಪರಿಣತ ಆವೇಶ್ ಖಾನ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ಆರ್. ಅಶ್ವಿನ್ ಅವರನ್ನು ಎದುರಿಸುವುದು ಕಠಿಣ ಸವಾಲು.

ಬ್ಯಾಟಿಂಗ್ನಲ್ಲಿಯೂ ಆತಿಥೇಯ ತಂಡವು ಬಲಿಷ್ಠವಾಗಿದೆ. ಎರಡು ಶತಕ ಗಳಿಸಿರುವ ಜೋಸ್ ಬಟ್ಲರ್, ರಿಯಾನ್ ಪರಾಗ್, ಸಂಜು ಅವರು ರನ್ ಸೂರೆ ಮಾಡುವ ಪ್ರಮುಖರು. ಯಶಸ್ವಿ ಜೈಸ್ವಾಲ್, ಶಿಮ್ರನ್ ಹೆಟ್ಮೆಯರ್ ಅವರು ತಮ್ಮ ಲಯ ಕಾಪಾಡಿಕೊಂಡರೆ ಮತ್ತೊಂದು ಗೆಲುವು ಖಿಚತ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಸಿನಿಮಾ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.