ಹೈದರಾಬಾದ್: ಐಪಿಎಲ್ ಟೂರ್ನಿಯಲ್ಲಿ ಸತತ ಆರು ಸೋಲುಗಳ ಬಳಿಕ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬೀರಿದೆ. ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ವಿರಾಟ್ ಕೊಹ್ಲಿ (51) ಹಾಗೂ ರಜತ್ ಪಾಟೀದಾರ್ (50) ಆಕರ್ಷಕ ಅರ್ಧಶತಕಗಳ ಬೆಂಬಲದಿಂದ ಏಳು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಎಂಟು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಕೊನೆಗೂ ಗೆದ್ದ ಆರ್‌ಸಿಬಿ...

ಸನ್‌ರೈಸರ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿರುವ ಆರ್‌ಸಿಬಿ, ಪ್ಲೇ-ಆಫ್ ಆಸೆ ಜೀವಂತವಾಗಿರಿಸಿದೆ. ಇದರೊಂದಿಗೆ ಸತತ ಆರು ಪಂದ್ಯಗಳ ಸೋಲಿನ ಸರಪಳಿ ಕಳಚಿಕೊಂಡಿದೆ. ಈ ಹಿಂದೆ 2017ರಲ್ಲೂ ಸತತ ಆರು ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಇನ್ನು 2018-19ರ ಐಪಿಎಲ್ ಆವೃತ್ತಿಯಲ್ಲಿ ಸತತ 7 ಪಂದ್ಯಗಳಲ್ಲಿ ಸೋಲು ಕಂಡಿತ್ತು.

ವಿರಾಟ್ ದಾಖಲೆ, ರನ್ ಬೇಟೆಯಲ್ಲಿ ಟಾಪ್...

43 ಎಸೆತಗಳನ್ನು ಎದುರಿಸಿದ ವಿರಾಟ್ 51 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿದರು. ಅಲ್ಲದೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ (ಆರೆಂಜ್ ಕ್ಯಾಪ್) ಮುಂಚೂಣಿಯಲ್ಲಿದ್ದಾರೆ. ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 61.43ರ ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿವೆ.

ಆ ಮೂಲಕ ಐಪಿಎಲ್‌ನ 10 ಆವೃತ್ತಿಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ವಿರಾಟ್ ಭಾಜನರಾಗಿದ್ದಾರೆ. ಸುರೇಶ್ ರೈನಾ ಹಾಗೂ ಡೇವಿಡ್ ವಾರ್ನರ್ ತಲಾ ಒಂಬತ್ತು ಬಾರಿ ಇದೇ ಸಾಧನೆ ಮಾಡಿದ್ದರು.

19 ಎಸೆತಗಳಲ್ಲಿ ಪಾಟೀದಾರ್ ಅರ್ಧಶತಕ...

ಕೇವಲ 19 ಎಸೆತಗಳಲ್ಲಿ ಪಾಟೀದಾರ್ ಅರ್ಧಶತಕದ ಸಾಧನೆ ಮಾಡಿದರು. ಆ ಮೂಲಕ ಆರ್‌ಸಿಬಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಇದು ಟೂರ್ನಿಯಲ್ಲಿ ಪಾಟೀದಾರ್ ಗಳಿಸಿದ ಸತತ ಎರಡನೇ ಅರ್ಧಶತಕವಾಗಿದೆ. ಅಂತಿಮವಾಗಿ 20 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 50 ರನ್ ಗಳಿಸಿದರು. ಕೆಕೆಆರ್ ವಿರುದ್ಧವೂ ಕೇವಲ 23 ಎಸೆತಗಳಲ್ಲಿ 52 ರನ್ ಗಳಿಸಿದ್ದರು.
.IPL 2024 | ಸತತ ಆರು ಸೋಲಿನ ಬಳಿಕ ಜಯದ ಹಾದಿಗೆ ಮರಳಿದ ಆರ್‌ಸಿಬಿ.IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!.
ಆರ್‌ಸಿಬಿ ಸತತ 3ನೇ ಸಲ 200+ ರನ್ ಸಾಧನೆ...

ಸತತ ಮೂರನೇ ಬಾರಿ ಆರ್‌ಸಿಬಿ 200ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೇ 288 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಬಳಿಕ ಕೆಕೆಆರ್ ವಿರುದ್ಧ 223 ರನ್ ಬೆನ್ನತ್ತಿದ ಆರ್‌ಸಿಬಿ 221 ರನ್ ಗಳಿಸಿ ಕೇವಲ ಒಂದು ರನ್ ಅಂತರದಿಂದ ಪಂದ್ಯ ಕಳೆದುಕೊಂಡಿತ್ತು. ಕಳೆದ ವರ್ಷ ಪಂಜಾಬ್ ಕಿಂಗ್ಸ್ ಸತತ ನಾಲ್ಕು ಬಾರಿ 200ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿತ್ತು.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡ ಆರ್‌ಸಿಬಿ...

ಈ ಗೆಲುವಿನ ಹೊರತಾಗಿಯೂ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಈವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡು ಗೆಲುವು, ಏಳು ಸೋಲಿನೊಂದಿಗೆ ಒಟ್ಟು ನಾಲ್ಕು ಅಂಕಗಳನ್ನಷ್ಟೇ ಹೊಂದಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಎಂಟು ಪಂದ್ಯಗಳಲ್ಲಿ ಐದು ಗೆಲುವು, ಮೂರು ಸೋಲಿನೊಂದಿಗೆ, 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಆರ್‌ಸಿಬಿ ಬೌಲರ್‌ಗಳ ಮೇಲುಗೈ, ಹೈದರಾಬಾದ್ ಬ್ಯಾಟರ್‌ಗಳ ವೈಫಲ್ಯ...

ಅಭಿಷೇಕ್ ಶರ್ಮಾ (31 ರನ್, 13 ಎಸೆತ) ಹಾಗೂ ಶಾಬಾಜ್ ಅಹಮದ್ (40*) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (31 ರನ್, 15 ಎಸೆತ) ಹೊರತುಪಡಿಸಿ ಹೈದರಾಬಾದ್‌ನ ಇತರೆಲ್ಲ ಬ್ಯಾಟರ್‌ಗಳು ವೈಫಲ್ಯವನ್ನು ಕಂಡರು. ಟ್ರಾವಿಸ್ ಹೆಡ್, ಏಡನ್ ಮಾರ್ಕರಮ್ (7), ಹೆನ್ರಿಚ್ ಕ್ಲಾಸೆನ್ (7) ಹಾಗೂ ನಿತೀಶ್ ರೆಡ್ಡಿ (13) ನಿರಾಸೆ ಮೂಡಿಸಿದರು. ಆರ್‌ಸಿಬಿ ಪರ ನಿಖರ ದಾಳಿ ಸಂಘಟಿಸಿದ ಕ್ಯಾಮರೂನ್ ಗ್ರೀನ್, ಕರ್ಣ ಶರ್ಮಾ ಹಾಗೂ ಸ್ವಪ್ನಿಲ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.
.DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್ರೌಂಡ್ ಆಟ, ಮೋಹಿತ್ ದುಬಾರಿ.CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್ನಲ್ಲಿ ಗರಿಷ್ಠ ಚೇಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.