ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದರು. ಐಪಿಎಲ್ನಲ್ಲಿ 8 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಅವರ ಪಾಲಾಯಿತು.
.ಕೊಹ್ಲಿ ಭದ್ರತೆಗೆ ಎದುರಾದ ಅಪಾಯ: ಅಭ್ಯಾಸದಿಂದ ದೂರ ಉಳಿದ RCB; ಭದ್ರತೆ ಹೆಚ್ಚಳ.
ತಮ್ಮ 252ನೇ ಐಪಿಎಲ್ ಪಂದ್ಯದಲ್ಲಿ ಅವರು ಈ ಸಾಧನೆಗೈದರು.

ಸಂದೀಪ್ ಶರ್ಮಾ ಅವರು ಎಸೆದ ಆರನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಲು ಅವರಿಗೆ 29 ರನ್ ಅವಶ್ಯಕತೆ ಇತ್ತು.
.ನಿವೃತ್ತಿಯ ಅರಿವಿದೆ, ಅದಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ: ಕೊಹ್ಲಿ.
ಐಪಿಎಲ್ನಲ್ಲಿ ಏಳು ಸಾವಿರಕ್ಕೂ ಅಧಿಕ ರನ್ ಬಾರಿಸಿದ ಏಕೈಕ ಬ್ಯಾಟರ್ ಎನ್ನುವ ದಾಖಲೆಯೂ ವಿರಾಟ್ ಹೆಸರಿನಲ್ಲಿದೆ. 6,769 ರನ್ ಗಳಿಸಿ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದರೆ, 6,628 ರನ್ ಗಳಿಸಿರುವ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.

ವಾರ್ನರ್ 6,565 ರನ್, ಸುರೇಶ್ ರೈನಾ 5528 ಹಾಗೂ 5,243 ರನ್ ಗಳಿಸಿರುವ ಮಹೇಂದ್ರ ಸಿಂಗ್ ಧೋನಿ ಅನಂತರದ ಸ್ಥಾನದಲ್ಲಿದ್ದಾರೆ.
.ಟಿ–20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿ: ಸೌರವ್ ಗಂಗೂಲಿ.
2008ರ ಉದ್ಘಾಟನಾ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಆಡುತ್ತಿದ್ದಾರೆ. ಅವರು ಒಟ್ಟು 8 ಶತಕ ಹಾಗೂ 54 ಅರ್ಧಶತಕ ಬಾರಿಸಿದ್ದಾರೆ.
.ಪ್ರದರ್ಶನವೇ ನನ್ನ ಏಕೈಕ ಕರೆನ್ಸಿ; ಯಾರ ಅನುಮೋದನೆಯೂ ಬೇಕಿಲ್ಲ: ವಿರಾಟ್ ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.