ಚೆನ್ನೈ: ಭಾರತ ಕ್ರಿಕೆಟ್ ತಂಡದ ಬಲಗೈ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ, ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 300 ವಿಕೆಟ್ಗಳ ಸಾಧನೆ ಮೆರೆದಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಶಾಂತ್ ಶರ್ಮಾ ಸ್ಮರಣೀಯ ದಾಖಲೆ ತಲುಪಿದರು.

ಈ ಮೂಲಕಟೆಸ್ಟ್ ಕ್ರಿಕೆಟ್ನಲ್ಲಿ 300 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ವೇಗದ ಬೌಲರ್ ಎಂಬ ಗೌರವಕ್ಕೆ ಭಾಜನವಾದರು. ಹಾಗೆಯೇ ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಭಾರತದ ಆರನೇ ಬೌಲರ್ ಎಂಬಖ್ಯಾತಿಗೆ ಪಾತ್ರವಾದರು.

ಇದನ್ನೂ ಓದಿ:IND vs ENG 1st Test: ಭಾರತ 337ಕ್ಕೆ ಆಲೌಟ್, ಭಾರಿ ಮುನ್ನಡೆಯತ್ತ ಇಂಗ್ಲೆಂಡ್

ಇಂಗ್ಲಿಷ್ ಬ್ಯಾಟ್ಸ್ಮನ್ ಡ್ಯಾನಿಯಲ್ ಲಾರೆನ್ಸ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಇಶಾಂತ್ ಶರ್ಮಾ 300ನೇ ವಿಕೆಟ್ ಪಡೆದರು.

ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 619 ವಿಕೆಟ್ಗಳನ್ನು ಪಡೆದಿದ್ದಾರೆ. ವೇಗಿಗಳ ಪೈಕಿ ಕಪಿಲ್ ದೇವ್ 434 ಹಾಗೂ ಜಹೀರ್ ಖಾನ್ 311 ವಿಕೆಟ್ಗಳನ್ನು ಪಡೆದಿದ್ದಾರೆ.

2007ನೇ ಇಸವಿಯಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಗೈದಿರುವ 32ರ ಹರೆಯದ ಇಶಾಂತ್ ಶರ್ಮಾ ತಮ್ಮ 98ನೇ ಟೆಸ್ಟ್ ಪಂದ್ಯದಲ್ಲಿ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್ ‘ಸಂಪೂರ್ಣ ವಿಭಿನ್ನ ಆಟಗಾರ’: ಬೆಸ್ ಮೆಚ್ಚುಗೆ

ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಇಂತಿದೆ:
1. ಅನಿಲ್ ಕುಂಬ್ಳೆ: 619
2. ಕಪಿಲ್ ದೇವ್: 434
3. ಹರಭಜನ್ ಸಿಂಗ್: 417
4. ರವಿಚಂದ್ರನ್ ಅಶ್ವಿನ್: 383
5. ಜಹೀರ್ ಖಾನ್: 311
6. ಇಶಾಂತ್ ಶರ್ಮಾ: 300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.