ಒಸಿಜೆಕ್, ಕ್ರೊವೇಷ್ಯಾ: ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಇಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಕಪ್ ಶೂಟಿಂಗ್‌ನಲ್ಲಿ ಗುರುವಾರ ಪುರುಷರ 10 ಮೀಟರ್ಸ್ ರೈಫಲ್ಸ್ ವಿಭಾಗದಲ್ಲಿ ಏಳನೇ ಸ್ಥಾನ ಪಡೆದರು.

20 ವರ್ಷದ ಪ್ರತಾಪ್ ಅರ್ಹತಾ ಸುತ್ತಿನಲ್ಲಿ 628 ಅಂಕಗಳನ್ನು ಗಳಿಸಿದರು.

ಭಾರತದ ದೀಪಕ್ ಕುಮಾರ್ (626) ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ (624.7) ಕ್ರಮವಾಗಿ 14 ಮತ್ತು 25ನೇ ಸ್ಥಾನ ಪಡೆದು ಅರ್ಹತಾ ಸುತ್ತಿನಿಂದ ಹೊರಬಿದ್ದರು.

ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿಯೂ ಭಾರತ ನಿರಾಶೆ ಅನುಭವಿಸಿತು. ಪ್ರಮುಖ ಶೂಟರ್‌ಗಳಾದ ಅಂಜುಮ್ ಮೋದ್ಗಿಲ್, ಅಪೂರ್ವಿ ಚಾಂಡೇಲಾ ಮತ್ತು ಇಳವೆನಿಲ್ಲ ವಾಳರಿವನ್ ಫೈನಲ್ ಪ್ರವೇಶಿಸುವಲ್ಲಿ ಸಫಲರಾಗಲಿಲ್ಲ.

ಅರ್ಹತಾ ಸುತ್ತಿನಲ್ಲಿ ಅಂಜುಮ್ 42ನೇ ಸ್ಥಾನ ಪಡೆದರು. ಜೂನಿಯರ್ ವಿಶ್ವಕಪ್ ಶೂಟಿಂಗ್ ಚಿನ್ನದ ಪದಕ ವಿಜೇತರಾಗಿರುವ ಇಳವೆನಿಲ್ಲ 621.2 ಪಾಯಿಂಟ್ಸ್ ಗಳಿಸಿದರು. ಆರಂಭದಲ್ಲಿ 623.2 ಪಾಯಿಂಟ್ಸ್ ಗಳಿಸಿದ್ದ ಅವರು ಶಾಟ್ ಒಂದರ್ ಪಾಯಿಂಟ್ಸ್ ಬಗ್ಗೆ ಪ್ರತಿಭಟನೆ ಸಲ್ಲಿಸಿದರು. ಆದರೆ ಅವರದ್ದು ಲೋಪ ಎಂದು ಸಾಬೀತಾಗಿ ಎರಡು ಪಾಯಿಂಟ್ಸ್‌ಗಳನ್ನು ಕಳೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.